

ಕುಂದಾಪುರ: ಶ್ರೀ ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಪಾದಂಗಳವರ ಜನ್ಮ ಶತಾಬ್ದಿ ಆಚರಣೆ ಮಹೋತ್ಸವದ ಸಂದರ್ಭ ನಡೆಯುತ್ತಿರುವ ಶತ ನಮನ ಶತ ಸ್ಮರಣ 100 ದಿನಗಳ ಅಖಂಡ ಭಜನಾ ಮಹೋತ್ಸವದ 50 ದಿನ ಪೂರ್ಣಗೊಂಡ ಸಂದರ್ಭದಲ್ಲಿ ಹಾಗೂ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ಸಂದರ್ಭದಲ್ಲಿ ವಟು ಪೂಜೆ ಕಾರ್ಯಕ್ರಮ ಗುರುವಾರ ನಡೆಯಿತು.
ಮೊದಲು ಸಮಾಜದ ಉಪನೀತ ವಟುಗಳಿಗೆ ಚಾತುರ್ಮಾಸ್ಯ ಸಮಿತಿ ಪದಾಧಿಕಾರಿಗಳು ಪಾದ್ಯ ನೀಡಿ ನಮಸ್ಕರಿಸಿದರು. ನಂತರ ಗುರುವರ್ಯರು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.