

ನಾಪೋಕ್ಲು: ಸ್ವಾಮಿ ವಿವೇಕಾನಂದರ ದಿವ್ಯ ಲೀಲಾ ಕ್ಷೇತ್ರವಾಗಿರುವ ಡಿವೈನ್ ಪಾರ್ಕ್‌ನ ಅಂಗ ಸಂಸ್ಥೆಯಾದ ವಿವೇಕ ಜಾಗೃತಿ ಬಳಗ ಮೂರ್ನಾಡು ವತಿಯಿಂದ ಮುರ್ನಾಡಿನ ಸಮುದಾಯ ಭವನದಲ್ಲಿ ಇತ್ತೀಚೆಗೆ ವಾತ್ಸಲ್ಯ ಶ್ರೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪದ್ಮಲತಾರಾವ್ ಮಾತನಾಡಿ, ಮಕ್ಕಳನ್ನು ಸಂಸ್ಕಾರಯುತವಾಗಿಸಲು ತಾಯಿ ಹಾಗೂ ಪಾಲಕರ ಪಾತ್ರದ ಕುರಿತು ವಿವರಿಸಿದರು.
ನಿವೃತ್ತ ವೈದ್ಯೆ ಬೈಲೋಳಿ ಕುಸುಮ ಲಕ್ಷ್ಮಣ್ ಗರ್ಭಿಣಿಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಗರ್ಭಿಣಿಯರಿಗೆ ಮಡಿಲು ತುಂಬಿಸುವ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಬಳಗದ ಅಧ್ಯಕ್ಷರಾದ ದಿವ್ಯಾ ತೇಜ್ ಕುಮಾರ್ ಇದ್ದರು. ಬಳಗದ ಕಾರ್ಯಕರ್ತರಾದ ನಿಶಾಮಣಿ, ಶೃತಿ ಇತರರು ಇದ್ದರು.