ಆಂಧ್ರಕ್ಕೆ ಆನೆಗಳ ಹಸ್ತಾಂತರ ವಿರೋಧಿಸಿ ವಾಟಾಳ್ ಪ್ರತಿಭಟನೆ

Rmgm-Ph-001-Vatal Nagraj Protest News Rmgm - 23-5-2025
Published on

ರಾಮನಗರ : ಆಂಧ್ರಪ್ರದೇಶಕ್ಕೆ ಆನೆಗಳನ್ನು ನೀಡಿರುವುದನ್ನು, ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ನೇಮಕ ಖಂಡಿಸಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾಕಾರದ ನಿರ್ಧಾರವನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ನಾಗರಾಜು ಮಾತನಾಡಿ ಸ್ಯಾಂಡಲ್ ಸೋಪ್ ರಾಜ್ಯದಲ್ಲಿ ಉಳಿದಿರುವ ಒಂದೇ ಒಂದು ಉದ್ಯಮವಾಗಿದೆ. ಮೈಸೂರು ಲ್ಯಾಂಪ್, ಎನ್‌ಜಿಎಫ್ ಎಲ್ಲಾ ಮುಚ್ಚಲಾಗಿದೆ. ಸ್ಯಾಂಡಲ್ ಸೋಪ್‌ಗೆ ಯಾವ ರಾಯಭಾರಿಯು ಬೇಡ. ಅದರ ಹೆಸರೇ ರಾಯಭಾರಿ. ಸಿಎಂ ಹಾಗೂ ಡಿಸಿಎಂ ಸಚಿವರು ಎಲ್ಲರೂ ಸ್ಯಾಂಡಲ್ ಸೋಪ್‌ನಲ್ಲಿ ಸ್ನಾನ ಮಾಡಿ ಗಂ ಎನ್ನಬೇಕು ಎಂದು ವ್ಯಂಗ್ಯವಾಡಿದರು.

ರಾಯಬಾರಿಗೆ ೬.೫೦ ಕೋಟಿ ಹಣ ಕೊಡುತ್ತಿರುವ ಹಿಂದೆ ದೊಡ್ಡ ರಾಜಕಾರಣ ಇದೆ. ಇದೇ ರೀತಿ ಹಣ ಕೊಡುತ್ತಾ ಹೋದರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತದೆ. ನಾನೇ ಪುಕ್ಸಟ್ಟೆ ರಾಯಭಾರಿಯಾಗುತ್ತೇನೆ ಆನೆ ನಾವು ಸಾಕಿದ ಮಗು ಯಾಕೆ ಕೊಟ್ಟಿದ್ದಾರೆ ನಮ್ಮ ಆನೆ ಅದ್ಭುತವಾಗಿದೆ. ಆನೆಗಳು ಹೋಗುವಾಗ ಕಣ್ಣೀರು ಹಾಕಿವೆ ಮತ್ತೆ ಆನೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದರು.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಬೇಡ ರಾಮನಗರ ದೇವಸ್ಥಾನ ಇದ್ದಂತೆ ರಾಮನಗರ ಎನ್ನುವ ಜಿಲ್ಲೆ ಇಡೀ ಭಾರತದಲ್ಲಿ ಅದ್ಭುತ ಹೆಸರು ಪಡೆದಿರುವ ಜಿಲ್ಲೆಯಾಗಿದೆ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ನಾಮಕರಣ ಮಾಡಿದ್ದಾರೆ. ಈ ಹಿಂದೆ ರಾಮನಗರಕ್ಕೆ ಕ್ಲೋಸ್‌ಪೇಟೆ ಎಂಬುದಾಗಿ ಇಂಗ್ಲಿಷ್ ಅಧಿಕಾರಿಯ ಹೆಸರು ಇತ್ತು. ಇದನ್ನು ಬದಲಾವಣೆ ಮಾಡಲಾಗಿತ್ತು.

ನಾಡು ಕಂಡ ಪ್ರಾಮಾಣಿಕ ಹಾಗೂ ದಕ್ಷ ಸಿಎಂ ಆಗಿದ್ದ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ಐತಿಹಾಸಿಕ ಹಿನ್ನೆಲೆ ಯನ್ನು ಸ್ಮರಿಸಿ ಹೆಸರು ಇರಿಸಿದ್ದಾರೆ. ಶೋಲೆ ಚಿತ್ರದ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಇದನ್ನು ರಾಜಕಾರಣಿಗಳು ಹಠಕ್ಕೆ ದ್ವೇಷಕ್ಕೆ ಬದಲಾಯಿಸುವುದು ಬೇಡ ಎಂದರು.

ಧೈರ್ಯವಾಗಿ ಮಾತಾಡುವ ಶಕ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ. ನಿಮಗೆ ಶಕ್ತಿ, ಪ್ರಾಮಾಣಿಕತೆ ಸತ್ಯದ ಪರ ಇದ್ದೇನೆ ಎಂಬ ಭಾವನೆ ಇದ್ದರೆ ಕೂಡಲೇ ಈ ಆದೇಶ ಹಿಂದಕ್ಕೆ ಪಡೆಯಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಯಾವಾಗಲೂ ರಿಯಲ್ ಎಸ್ಟೇಟ್ ವ್ಯಾಪಾರದ ಚಿಂತನೆ ಹೊಂದಿದ್ದಾರೆ ಎಂದು ಕಿಡಿ ಕಾರಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಜಿಲ್ಲಾಧ್ಯಕ್ಷ ಜೈಕುಮಾರ್ ತಾಲ್ಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ಯುವ ಘಟಕ ಅಧ್ಯಕ್ಷ ಆರ್.ಜೆ ಅರ್ಜುನ್, ಮುಖಂಡರಾದ ಕೆಂಪರಾಜು, ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯಸುಧಾ, ಬಿಡದಿ ಅಧ್ಯಕ್ಷ ಮಂಜುನಾಥ್, ಪ್ರಸನ್ನ, ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net