

ಅರಕಲಗೂಡು: ವಾಸವಾಂಬ ಸಹಕಾರ ಬ್ಯಾಂಕ್ ಸ್ಥಾಪನೆಯಾಗಿ 115 ವರ್ಷಗಳಾಗಿವೆ. ಶತಮಾನೋತ್ಸವದ ನೆನಪಿಗಾಗಿ 2014ರಲ್ಲಿ ಪಟ್ಟಣದಲ್ಲಿ ತೆರೆದ ಶಾಖೆ ದಶಮಾನೋತ್ಸವ ಆಚರಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಗೌತಮ್ ತಿಳಿಸಿದರು.
ಪಟ್ಟಣದ ವಾಸವಾಂಬ ಸಹಕಾರ ಬ್ಯಾಂಕ್‌ನಲ್ಲಿ ಬುಧವಾರ ದಶಮಾನೋತ್ಸವ ಅಂಗವಾಗಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 10 ವರ್ಷದಲ್ಲಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದೆ. 12 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 20 ಕೋಟಿ ರೂ. ವಿವಿಧ ಸಾಲಗಳನ್ನು ನೀಡಿದೆ. ವಿವಿಧ ಸಾಲ ಯೋಜನೆಗಳನ್ನು ಹೊಂದಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಬ್ಯಾಂಕ್ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಗಳನ್ನು ಒದಗಿಸಲಿದೆ ಹಾಗೂ ಸ್ವಂತ ಕಟ್ಟಡ ಹೊಂದುವ ಇಚ್ಛೆ ಹೊಂದಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಎನ್. ಸುಭಾಷ್, ಮಾಜಿ ಅಧ್ಯಕ್ಷ ಎ.ಆರ್. ರವಿಕುಮಾರ್, ನಿರ್ದೇಶಕರಾದ ರೋಹಿತ್, ಶಶಿಕಲಾ, ವಿ.ಎ.ಕೃಷ್ಣ, ಸುಮಂತ್, ಕೆ.ಶ್ರೀಧರ್, ಮುಕುಂದ್, ಕಿರಣ್, ಸ್ಪಂದನ್, ಫಣಿದತ್ತ, ಸಿಇಒ ಎಸ್.ಆರ್. ಮೂರ್ತಿ, ಶಾಖಾ ವ್ಯವಸ್ಥಾಪಕ ಎಂ.ಪಿ. ದಿನೇಶ್ ಇತರರಿದ್ದರು.