

ಸರಗೂರು: ತಾಲೂಕು ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ವಾಸುಕಿ ನಾಗೇಶ್ ಅವರನ್ನು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದ ಆವರಣದಲ್ಲಿ ಸೋಮವಾರ ನಡೆಸಲಾದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅನ್ನಪೂರ್ಣೇಶ್ವರಿ ಶಾಮಿಯಾನ ಮಾಲೀಕ ಎಸ್.ನಾರಾಯಣ್, ಉಪಾಧ್ಯಕ್ಷರಾಗಿ ಆದಿಶಕ್ತಿ ಗಣೇಶ್, ಬಸಾಪುರ ರೇವಣ್ಣ, ನ್ಯಾಷನಲ್ ಶಾಮಿಯಾನ ರಾಹೀಲ್ ಪಾಷ, ಕಾರ್ಯದರ್ಶಿಯಾಗಿ ಆಗತ್ತೂರು ಪಿ.ಜವರನಾಯಕ, ಸಹಕಾರ್ಯದರ್ಶಿಯಾಗಿ ಜನನಿ ವಿಜಯ್ ಕುಮಾರ್, ಖಜಾಂಚಿಯಾಗಿ ಚೌಡೇಶ್ವರಿ ರಂಗಸ್ವಾಮಿ, ನಿರ್ದೇಶಕರಾಗಿ ಇಟ್ನಾ ಸಿದ್ದನಾಯಕ, ಮುಳ್ಳೂರು ಕಡಜೆಟ್ಟಅಶ್ವತ್ ನಾರಾಯಣ, ಮುಳ್ಳೂರು ಪ್ರಕಾಶ್, ಮಹೇಶ್, ಬಿ.ಮಟಕೆರೆ ಮಂಜು ಹಾಗೂ ನಂದಿಗೌಡ್ರು, ಬಸಾಪುರ ಶಿವಣ್ಣ, ಕಬಿನಿ ಸುರೇಂದ್ರ, ಶಾಂತಿಪುರ ಹರೀಶ್, ಹೊಸ ಬಿದರಹಳ್ಳಿ ಚಿನ್ನಯ್ಯ, ಬೆದ್ದಲಪುರ ಸೋಮೇಶ, ಕೊತ್ತೇಗಾಲ ನಂದಿ, ಹೊಸಬೀರ್ವಾಳ್ ಕೇಬಲ್ ಕುಮಾರ್, ಬಿದರಹಳ್ಳಿ ಕುಮಾರ್, ಕೊತ್ತೇಗಾಲ ನಂದೀಶ್ ಬುದ್ದಿ, ಆಗತ್ತೂರು ಎಸಿ.ನಾಗರಾಜು, ಕೊತ್ತೇಗಾಲ ರಮೇಶ್, ಕಂದೇಗಾಲ ಸಚಿನ್, ಮೂಳ್ಳೂರು ಹುಂಡಿ ಸತೀಶ್, ತೋರವಳ್ಳಿ ಸಿದ್ದಪ್ಪಾಜಿ, ನಿಲವಾಗಿಲು ನಾಗ, ಕಲ್ಲಾಂಬಾಳು ಸುರೇಶ್, ಬಡಗಲಪುರ ವೆಂಕಟೇಶ್ ಅವರನ್ನು ಆಯ್ಕೆಮಾಡಲಾಯಿತು.