ವರುಣ ಅಬ್ಬರ, ಕೊಳ್ಳೇಗಾಲದಲ್ಲಿ ಅವಾಂತರ

10-KGl-2,,,,,,,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3795374, 0.21765645);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 46;
Published on

ಕೊಳ್ಳೇಗಾಲ: ಗುರುವಾರ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಸರ್ಕಾಟನ್ ಮತ್ತು ಕುಪ್ಪಮ್ಮ ಕಾಲುವೆಯ ಕಲುಷಿತ ನೀರು ಉಕ್ಕಿ ಹರಿದು ಪಟ್ಟಣದ ಕೋಡಿ ಬೀದಿ ಹಾಗೂ ಇಂದಿರಾ ಕಾಲನಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

13ನೇ ವಾರ್ಡ್ ವ್ಯಾಪ್ತಿಯ ಕೋಡಿ ಬೀದಿಯ ಎರಡು ರಸ್ತೆಗಳಿಗೆ ಕಲುಷಿತ ನೀರು ನುಗ್ಗಿದ್ದು ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಸರ್ಕಾಟನ್ ಕಾಲುವೆ, ಕೊಂಗಳಗೆರೆಯಲ್ಲಿರುವ ತ್ಯಾಜ್ಯ ಮಿಶ್ರಿತ ಕೊಳಚೆ ನೀರು ಮನೆ ಮುಂಭಾಗವೇ ಹರಿಯುತ್ತಿದೆ. ಪರಿಣಾಮ ಮಕ್ಕಳು, ವೃದ್ಧರು ಹಾಗೂ ನಿವಾಸಿಗಳು ಕೊಳಚೆ ನೀರಿನ ಮೇಲೆ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಡಾವಣೆ ಹಳ್ಳದಲ್ಲಿರುವುದರಿಂದ ಹಾಗೂ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಹರಿಯದೆ ತೊಂದರೆಯಾಗುತ್ತಿದೆ.

11ನೇ ವಾರ್ಡ್ ವ್ಯಾಪ್ತಿಯ ಇಂದಿರಾ ಕಾಲನಿಯೊಳಗೆ ಹಾದು ಹೋಗಿರುವ ಕುಪ್ಪಮ್ಮ ಕಾಲುವೆ ನೀರು ಕೂಡ ಉಕ್ಕಿ ಹರಿದಿದೆ. ಕಾಲನಿ ನಿವಾಸಿ ಮಮತಾ ಸೇರಿದಂತೆ ಇನ್ನಿತರ ಮನೆಗಳಿಗೆ ನೀರು ನುಗ್ಗಿದ್ದು ಸಂಕಷ್ಟ ಅನುಭವಿಸುವಂತಾಗಿದೆ

ಪ್ರತಿ ವರ್ಷವೂ ಅಧಿಕ ಮಳೆಯಾದರೆ ಇಂದಿರಾ ಕಾಲನಿ ಮತ್ತು ಕೋಡಿ ಬೀದಿಗೆ ನೀರು ನುಗ್ಗಿ ಜನರಿಗೆ ಸಮಸ್ಯೆ ಉಂಟಾದರೂ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಕ್ರಮವಹಿಸಿಲ್ಲ ಎಂದು ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಳಚೆ ನೀರು ಮನೆಗೆ ಹಾಗೂ ಬಡಾವಣೆಗೆ ನುಗ್ಗುವುದರಿಂದ ರೋಗ-ರುಜಿನಗಳು ಹರಡುವ ಭೀತಿಯಿದೆ. ಮನೆಯೊಳಗೆ ಕಲುಷಿತ ನೀರು ಹೋಗುವುದರಿಂದ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಗರಸಭೆ ನಿರ್ಲಕ್ಷೃ ಧೋರಣೆ ವಿರುದ್ಧ ಮುಂದಿನ ದಿನಗಳಲ್ಲಿ ನಿವಾಸಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೇರೆಯವರ ಮನೆ ಆಶ್ರಯಿಸಿದ ಕುಟುಂಬ:

ಇಂದಿರಾ ಕಾಲನಿಯ ಮಮತಾ ಎಂಬುವರ ಮನೆಗೆ ರಾತ್ರಿ ಕಾಲುವೆಯ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹಾಗಾಗಿ ಮಮತಾ ಸೇರಿದಂತೆ ಇಬ್ಬರು ಸಣ್ಣ ಮಕ್ಕಳು ಪಕ್ಕದ ಮನೆಯ ಛಾವಣಿಯ ಮೇಲೆ ಆಶ್ರಯ ಪಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net