

ನಾಪೋಕ್ಲು: ರಾಮನವಮಿಯ ಪ್ರಯುಕ್ತ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಬಕ್ಕದಲ್ಲಿ ಶ್ರೀರಾಮ ಭಕ್ತ ಸಮಿತಿ ಶ್ರೀ ಗಜಾನನ ಯುವಕ ಭಕ್ತ ಮಂಡಳಿ ಶ್ರೀ ಕೃಷ್ಣ, ಸಂಕ್ರಾಂತಿ, ಸಾಗರ ಸ್ವ-ಸಹಾಯ ಸಂಘ ಅಂಬಿಕಾ ಸ್ತ್ರೀ ಶಕ್ತಿ ಸಂಘಗಳ ಸಹಯೋಗದಲ್ಲಿ ಗಣಪತಿ ಹೋಮ, ಕಳಸ ಪೂಜೆ ಹಾಗೂ ಶ್ರೀರಾಮ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಚೀ.ನಾ.ಸೋಮೇಶ್ ಮಾತನಾಡಿ, ಜಗತ್ತಿನಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮಿಸುವಂತಹ ದೇವರು ಎಂದಿದ್ದರೆ ಅವರಲ್ಲಿ ಶ್ರೀರಾಮ ದೇವರು ಮೊದಲಿಗರು ಎಂದರು.
ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂಥ ಕಾರ್ಯಕಾರಿಣಿ ಸಮಿತಿ ಸದಸ್ಯ ಕುಕ್ಕೇರ ಅಜಿತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಚಂದ್ರಉಡೋತ್ ಭಾಗವಹಿಸಿದ್ದರು.
ಕೈಕಾಡು ಭಗವತಿ ದೇವಸ್ಥಾನದ ಪ್ರಧಾನ ಅರ್ಚಕ ಅಖಿಲೇಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸೂದನ ಜಗತ್, ಲವ ಪೂಜಾರಿ, ಬಾಡನ ಸತೀಶ್ ಇತರರು ನೇತೃತ್ವವಹಿಸಿದ್ದರು. ==========