

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್ಡಿಎಸ್ಒ) ಅಧಿಕಾರಿಗಳು ಸೋಮವಾರದಿಂದ ಬೊಮ್ಮನಹಳ್ಳಿಯಿಂದ ಆರ್.ವಿ. ರಸ್ತೆ ನಡುವೆ, ಆಸಿಲೇಷನ್ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ಫೋರ್ಸ್ ಡಿಸ್ಟ್ರಿಬೂಷನ್ (ಇಬಿಡಿ) ಪ್ರಯೋಗಗಳನ್ನು ಆರಂಭಿಸಿದ್ದಾರೆ.
ಈ ಪ್ರಾಯೋಗಿಕ ಸಂಚಾರ 12-14 ದಿನಗಳವರೆಗೆ ನಡೆಯಲಿದೆ. ಆರ್ಡಿಎಸ್ಒ ಪ್ರಾಯೋಗಿಕ ವರದಿ ಸಲ್ಲಿಸಿದ ನಂತರ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿ ಪಡೆಯಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಆಸಿಲೇಷನ್ ಮತ್ತು ಇಬಿಡಿ ಪ್ರಯೋಗದಲ್ಲಿ, ಮೆಟ್ರೋ ರೈಲಿನಲ್ಲಿ ಮರಳು ಮೂಟೆಯನ್ನು ತುಂಬಿಸಿ ಭಾರ ಪರೀಕ್ಷೆ ಮಾಡಲಾಗುತ್ತದೆ. ಬೋಗಿಯಲ್ಲಿ ನೀರನ್ನು ತುಂಬಿಸಿ ನಿಯಂತ್ರಣ ಪರೀಕ್ಷೆ ಮಾಡಲಾಗುತ್ತದೆ. ವೇಗವಾಗಿ ಹಾಗೂ ನಿಧಾನಕ್ಕೆ ಚಲಿಸುತ್ತ ರೈಲನ್ನು ನಿಯಂತ್ರಣಕ್ಕೆ ತರುವುದನ್ನು ಪರೀಕ್ಷಿಸಲಾಗುತ್ತದೆ.