

ಕಲಘಟಗಿ: ಪಟ್ಟಣದ ವಿದ್ಯಾಗಿರಿಯ ಶ್ರೀ ಈಶ್ವರ ದೇವಸ್ಥಾನದಲ್ಲಿ ಗುರುವಾರ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ಶ್ರಾವಣ ಮಾಸ ಹಾಗೂ ನೂಲ ಹುಣ್ಣಿಮೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಮಹಾಪೂಜೆಯಲ್ಲಿ ದೇವಸ್ಥಾನ ಪ್ರಧಾನ ಅರ್ಚಕರಾದ ವೇ.ಮೂ. ವಿರೇಶ ಶಾಸ್ತ್ರೀಗಳು ಹಾಗೂ ವೇ.ಮೂ. ಚಂದ್ರಶೇಖರಯ್ಯ ಶಾಸ್ತ್ರೀಗಳ ನೇತೃತ್ವದಲ್ಲಿ ಬೆಳಗ್ಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
15 ವರ್ಷದಿಂದ ಶ್ರೀ ಈಶ್ವರ ದೇವಸ್ಥಾನದ ಪೂಜಾ ಸೇವೆ ಸಲ್ಲಿಸುತ್ತ ಬಂದಿರುವ ಎಸ್.ವಿ. ಪಾಟೀಲ, ಅನ್ನಪೂರ್ಣ ದಂಪತಿಯನ್ನು
ಸನ್ಮಾನಿಸಿ ಗೌರವಿಸಲಾಯಿತು.
ಅಶೋಕ ಅರುಟಗಿ, ಸಂಗಪ್ಪ ಮಹಾಜನಶಟ್ರ್, ಎಸ್.ಟಿ ತೆಗ್ಗಿಹಳ್ಳಿ, ಎನ್.ಎಫ್. ಉಪಾಧ್ಯ, ಪರಶುರಾಮ ವಾಲಿಕಾರ, ಪ್ರಮೋದ ಪಾಲ್ಕರ್, ಎಸ್.ಎಸ್. ಹಾವೇರಿ, ಕಲ್ಲಪ್ಪ ಕುಂಬಾರ, ಗಂಗಾಧರ ಗೌಳಿ, ಎನ್.ಎಂ. ಮೇತ್ರಿ, ಪುರದನಗೌಡ್ರ, ಮಂಜುನಾಥ ವಾಲಿಕಾರ ಇದ್ದರು.