

ಗಂಗೊಳ್ಳಿ: ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು.
ಶ್ರೀ ಮಹಿಷಾಸುರ ಮರ್ದಿನಿಗೆ ಸಾಮೂಹಿಕ ತುಪ್ಪದ ದೀಪ ಸೇವೆ ನಡೆಯಿತು. ಗಿರೀಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು.
ಪ್ರವೀಣ ಗಂಗೊಳ್ಳಿ ಸಂಪಾದಕತ್ವದ ಮಹಿಷಾಸುರಮರ್ದಿನಿ ಮಾಸ ಪತ್ರಿಕೆ ನೂತನ ಸಂಚಿಕೆ ಅನಾವರಣಗೊಳಿಸಲಾಯಿತು.
ಅನ್ನದಾನ ನಿಧಿಗೆ ನೆರವು ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು. ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಉಪಾಧ್ಯಕ್ಷ ಸದಾನಂದ ಬಳ್ಕೂರು, ನಾಗೇಶ ಬಿ.ಕಾಂಚನ್, ಜಗದೀಶ ಮೇಸ್ತ್ರಿ, ಕೋಶಾಧಿಕಾರಿ ಸತೀಶ ಎಂ.ನಾಯ್ಕ, ಆಡಳಿತ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲಾ ಜಿ.ಚಂದನ್, ಮೊಗವೀರ ಯುವ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ಸ್ತ್ರೀ ಶಕ್ತಿಯ ಪದಾಧಿಕಾರಿಗಳು, ಗುರಿಕಾರರು ಉಪಸ್ಥಿತರಿದ್ದರು.