

ಕೋಟ: ಜೀವನ್‌ಮಿತ್ರ ಆಂಬುಲೆನ್ಸ್ ಹಾಗೂ ಜೀವನ್‌ಮಿತ್ರ ಸೇವಾ ಟ್ರಸ್ಟ್ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಮಾಜದಲ್ಲಿ ಅಶಕ್ತರಿಗೆ ನೆರವಾಗುತ್ತ ಬಂದಿರುವುದು ಸಂತಸದ ವಿಚಾರ ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.
ಕೋಟ ಗಿಳಿಯಾರಿನ ಸಮೀಪ ಸ್ಮಾರ್ಟ್ ಸಿಟಿಯಲ್ಲಿ ಕೋಟ ಜೀವನ್‌ಮಿತ್ರ ಸೇವಾ ಟ್ರಸ್ಟ್ ದಶಮ ಸಂಭ್ರಮದಲ್ಲಿ ಗುರುವಾರ ಮಾತನಾಡಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸುಧೀರ್ ಕುಮಾರ್ ಮುರೊಳಿ ಶುಭ ಹಾರೈಸಿದರು. ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಹೊಸಪೇಟೆ ಶ್ರೀ ಚಂದ್ರಮೌಳೇಶ್ವರ ಅವಧೂತರು, ರಂಗಭೂಮಿ ಕಲಾವಿದ ಸುರೇಂದ್ರ ಗಂಗೊಳ್ಳಿ, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ, ಮಣೂರು ಮಹಾಲಿಂಗೇಶ್ವರ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್, ಕೋಟ ಗ್ರಾಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಉದ್ಯಮಿ ಆದರ್ಶ ಶೆಟ್ಟಿ, ಶ್ರೀಕಾಂತ್ ಶೆಣೈ, ಜೀವನ್‌ಮಿತ್ರ ಸೇವಾ ಟ್ರಸ್ಟ್ ಪ್ರವರ್ತಕ ನಾಗರಾಜ್ ಪುತ್ರನ್, ಸಹಪ್ರವರ್ತಕ ನಾಗೇಂದ್ರ ಪುತ್ರನ್ ಇದ್ದರು.
ಜೀವನ್‌ಮಿತ್ರ ಸೇವಾ ಟ್ರಸ್ಟ್ ಸದಸ್ಯ ಸುಶಾಂತ್ ಶೆಟ್ಟಿ ಅಚ್ಲಾಡಿ ಸ್ವಾಗತಿಸಿ, ಪತ್ರಕರ್ತ ಪ್ರನುತ್ ಆರ್.ಗಾಣಿಗ, ಪ್ರದೀಪ್ ಗಿಳಿಯಾರು, ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ಪುತ್ರನ್ ವಂದಿಸಿದರು.
ಸಾಧಕರಾದ ಇಬ್ರಾಹಿಂ ಗಂಗೊಳ್ಳಿ, ಮಂಜುನಾಥ ನಾಯಕ್, ರವಿ ಬನ್ನಾಡಿ, ದಿನೇಶ್ ಪುತ್ರನ್, ಪ್ರಕಾಶ್ ಗಾಣಿಗ ಸಾಲಿಗ್ರಾಮ, ಮಲ್ಲಿಗೆ ಕೃಷಿಕರಾದ ಪ್ರೇಮಾ ಪೂಜಾರಿಕುಂಭಾಶಿ, ಉರಗ ರಕ್ಷಕ ವಿಜಯ ಪೂಜಾರಿ ಬಾರಿಕೆರೆ, ಹಾಗೂ ಗಣೇಶ್ ಭಂಡಾರಿ, ಸ್ಥಳೀಯ ಪತ್ರಕರ್ತರಾದ ರಾಜೇಶ್ ಗಾಣಿಗ ಅಚ್ಲಾಡಿ, ಪ್ರಭಾಕರ್ ಆಚಾರ್ಯ ಚಿತ್ತೂರು, ಚಂದ್ರಶೇಖರ ಬೀಜಡಿ, ಇಬ್ರಾಹಿಂ ಪಡುಕರೆ, ಅವರನ್ನು ಸನ್ಮಾನಿಸಲಾಯಿತು. ಅಶಕ್ತರಿಗೆ ನೆರವು, ನೇತ್ರದಾನ ಶಿಬಿರ, ಫೋಟೋಗ್ರಫಿ ಸ್ಪರ್ಧೆ ನಡೆಯಿತು.