

ತುಮಕೂರು: ವರಮಹಾಲಕ್ಷಿ ಹಬ್ಬದ ಸಡ-ಗರದಲ್ಲಿ ನಗರದ ಹೆಂಗೆಳೆಯರು ಮಿಂದೆದ್ದರು. ಬೆಲೆ ಏರಿಕೆ ನಡುವೆ ಹಬ್ಬದ ಸಂಭ್ರಮಕ್ಕೆ ಏನೂ ಕಡಿವಾಣ ಬೀಳಲಿಲ್ಲ. ಮನೆ, ಮನೆ-ಯಲ್ಲಿ ಮಹಾಲಕ್ಷಿ$್ಮ-ಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿ, ಪ್ರಾರ್ಥಿಸಿದರು.
ನಗರದ ಬಿ.ಎಚ್.ರಸ್ತೆಯ ಟಿಜಿಎಂಜಿ ಬ್ಯಾಂಕ್ ಆವರಣದ ವರಮಹಾಲಕ್ಷಿ$್ಮಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ಪೂಜೆಪುನಸ್ಕಾರ ಸಲ್ಲಿಸಿ ಲಕ್ಷಿ ಕೃಪೆಗೆ ಪಾತ್ರರಾದರು. ನಗರದ ಜೆ.ಸಿ.ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು,
ನಗರದ ಶ್ರೀಲಕ್ಷಿ ದೇವಾಲಯ ಹಾಗೂ ಶ್ರೀರಾಮನಗರದ ಶ್ರೀ ಮಹಾಲಕ್ಷಿ ದೇವಸ್ಥಾಸ್ಥಾನದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ದೇವಸ್ಥಾನದಲ್ಲಿ ಜನಜಂಗುಳಿತ್ತು. ಮಹಿಳೆಯರು, ಯುವತಿಯರು ಹೊಸ ಸೀರೆ, ಹೊಸ ಉಡುಪು ಧರಿಸಿ ಸಂಭ್ರಮಿಸುತ್ತಿದ್ದದು ಕಂಡುಬಂತು.
ಮನೆ,ಮನೆಗಳಲ್ಲೂ ಲಕ್ಷಿ ಕೂಡಿಸಿ ವಿಶೇಷ ಪೂಜೆ ಅಲಂಕಾರ ಮಾಡಿ ಭಕ್ತಿಭಾವ ಮೆರೆದು ಪುನೀತರಾದರು. ಲಕ್ಷಿ ಹಬ್ಬವೆಂದರೆ ಮನೆ -ಮಂದಿ-ಗೆಲ್ಲ ಉಲ್ಲಾಸ. ಹೆಣ್ಣುಮಕ್ಕಳು ಲಕ್ಷಿ$್ಮದೇವಿ-ಯನ್ನು ಚೆಂದಗೆ ಸಿಂಗ-ರಿಸಿ ಕಣ್ತುಂಬಿ-ಕೊ-ಂಡು ಸಂತೋಷ ಪಟ್ಟರು. ಈ ಹಬ್ಬದ ಪ್ರಯು-ಕ್ತ ನಗರದೆಲ್ಲಡೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ಹೆಣ್ಣುಮಕ್ಕಳು ಮನೆ, ಮನೆಗು ತೆರಳಿ ಹರಿಷಿನ-ಕುಂಕುಮ ಪಡೆಯುತ್ತಾ ಖುಷಿ ಹಂಚಿಕೊಂಡರು.
ಈ ಬಾರಿ ಬೆಲೆ ಏರಿಕೆ ಎಂದಿಗಿಂತಲೂ ದುಪ್ಪಟ್ಟಾಗಿದ್ದರೂ ಸಹ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ತಮ್ಮ ಇಷ್ಟಾರ್ಥ ಸಿದ್ದಿಸುವ ವರಮಹಾಲಕ್ಷಿ ಹಬ್ಬವನ್ನು ಸಡಗರದಿಂದ ಆಚರಿಸಿದರು.