

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕ ಬೆಲೆ ಏರಿಕೆ ಬಿಸಿಯ ನಡುವೆಯೂ ಎಲೆಡೆ ಕಳೆಗಟ್ಟಿದ ಸಂಭ್ರಮ |
ಸಕಲ ಸಮೃದ್ಧಿಗಳನ್ನು ಕಲ್ಪಿಸುವ `ವರ ಮಹಾಲಕ್ಷ್ಮೀ ಹಬ್ಬ.ವನ್ನು ಶ್ರಾವಣ ಮಾಸದ ಶುಕ್ರವಾರದಂದು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ತುಂಬೆಲ್ಲಾ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಲೆ ಏರಿಕೆಯ ಬಿಸಿಯ ನಡೆಯೂ ಎಲ್ಲರು ವರಮಹಾಲಕ್ಷಿö್ಮÃ ಪೂಜೆ ಮಾಡಿ ಧನ್ಯತೆ ಮೆರೆದರು.
ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಮನೆಯಲ್ಲಿ ಅಷ್ಟ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದು, ಹೀಗಾಗಿ ಇದು ಹಬ್ಬದಷ್ಟೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಬೆಂಗಳೂರು ಭಾಗದಂತೆ ಕ್ರಮೇಣವಾಗಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಹಬ್ಬದ ಸಂಭ್ರಮ ಜೋರಾಗುತ್ತಿದೆ. ಎಲ್ಲಡೆ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.
ಮನೆ-ಮನೆಗಳಲ್ಲಿ ವರಮಹಾಲಕ್ಷಿö್ಮ ಹಬ್ಬದ ನಿಮಿತ್ತವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಟಪ ನಿರ್ಮಿಸಿ ವರಮಹಾಲಕ್ಷಿö್ಮÃಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು. ಮನೆಗಳಲ್ಲಿ ಪೂಜೆ ಬಳಿಕ ಮುತೈದೆಯರಿಗೆ ಉಡಿ ತುಂಬಿದರು. ಪೂಜೆಗೆ ಆಪ್ತರು, ಬಂಧುಗಳನ್ನು ಆಹ್ವಾನಿಸಿ ಪ್ರಸಾದ ವಿತರಿಸಿದರು.
ವರಮಹಾಲಕ್ಷಿö್ಮÃ ಪೂಜೆಯಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ವರಮಹಾಲಕ್ಷ್ಮಿ ವ್ರತವು ಕೃಷ್ಣ ಧರ್ಮರಾಜನಿಗೆ ಮಾಡಿದ ಉಪದೇಶವಾಗಿದೆ. ಪಾಂಡವರು ವನವಾಸದಲ್ಲಿz್ದÁಗ ಅದರಿಂದ ಪಾರಾಗಲು, ಅಷ್ಟೆÊಶ್ವರ್ಯ ಪಾಪ್ತಿಗಾಗಿ ಮಾಡಿರುವ ವ್ರತವಾಗಿದೆ. ಈ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಗೆ ಸಮೀಪದ ಶುಕ್ರವಾರದಂದು ನಾಡಿನೆಲ್ಲಡೆ ಮಾಡಿಕೊಂಡು ಬರಲಾಗುತ್ತದೆ.
ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಪೂಜೆ ಜರುಗಿದವು. ಶ್ರೀಮಂತರ ಭರ್ಜರಿಯಾಗಿ ನೆರವೇರಿಸಿದರೆ, ಇನ್ನೂ ಮಧ್ಯಮ ವರ್ಗದವರು ಸಹ ತಮ್ಮ ಶಕ್ತಿಯಂತೆ ಪೂಜಾ ಕಾರ್ಯಕ್ರಮ ನಡೆಸಿಕೊಂಡ ಬಂದರು. ಹಲವು ಕಡೆಗಳಲ್ಲಿ ಅನ್ನ ದಾಸೋಹ ಸಹ ಏರ್ಪಡಿಸಲಾಗಿತ್ತು.
ಮಾರ್ಕೇಟ್‌ಫುಲ್ ರಶ್
ವರ ಮಹಾಲಕ್ಷಿö್ಮ ಹಬ್ಬದ ನಿಮಿತ್ತವಾಗಿ ಗುರುವಾರದಂತೆ ಶುಕ್ರವಾರ ಬೆಳಗ್ಗೆಯೂ ಮಾರುಕಟ್ಟೆ ಫುಲ್ ರಶ್ ಆಗಿದ್ದುವು. ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾಡಿದ ದೃಶ್ಯ ಕಂಡು ಬಂದಿತು. ಶ್ರಾವಣ ಬಂದರೆ ಹೂವಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಮುನ್ನಾದಿನ ಗುರುವಾರ ಮತ್ತು ಹಬ್ಬದ ದಿನವಾದ ಶುಕ್ರವಾರ ನಗರ ಸೇರಿದಂತೆ ಜಿ¯್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಬಾಳೆ ದಿಂಡು, ತೆಂಗಿನ ಗರಿ, ಮೋಸಂಬಿ, ದಾಳಿಂಬೆ, ಸಪೋಟಾ, ಪೇರಲ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳು, ಮಲ್ಲಿಗೆ, ಕನಕಾಂಬರಿ, ಸೇವಂತಿಗೆ, ಕ್ಯಾದಗಿ ಸೇರಿದಂತೆ ವಿವಿಧ ಹೂಗಳ ಖರೀದಿ ಜೋರಾಗಿತ್ತು.