

ಬೆಂಗಳೂರು: ತೀವ್ರ ಹೊಟ್ಟೆ ನೋವಿನಿಂದ ಚಿಕಿತ್ಸೆಗೆ ದಾಖಲಾದ 50 ವರ್ಷದ ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ (7.4 ಕೆಜಿ) ಗರ್ಭಾಶಯದ ಗಡ್ಡೆ (ಫೈಬ್ರಾಯ್ಡಾ)ಯನ್ನು ನಗರದ ವಾಣಿವಿಲಾಸ ಆಸ್ಪತ್ರೆ ವೈದ್ಯರು ಶಸಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಕಳೆದ ಆರು ತಿಂಗಳಿನಿಂದ ಹೊಟ್ಟೆ ನೋವು ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯಲ್ಲಿ ಅಸ್ವಸ್ಥತೆ ದಿನೇದಿನೆ ಹೆಚ್ಚಾಯಿತು. ಸಮಸ್ಯೆ ಹೆಚ್ಚಾದಾಗ ಚಿಕಿತ್ಸೆಗಾಗಿ ವಾಣಿವಿಲಾಸ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಸ್ಕಾೃನಿಂಗ್ ಹಾಗೂ ಪ್ರಯೋಗಾಲಯ ಪರೀಕ್ಷೆಯಿಂದ ಗರ್ಭಾಶಯದಲ್ಲಿ ಫೈಬ್ರಾಯ್ಡಾ ಇರುವುದು ಪತ್ತೆಯಾಯಿತು. ಬಳಿಕ ವೈದ್ಯರು ಶಸಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಚಿಕಿತ್ಸೆಗಾಗಿ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯಗೆ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸಿ. ಸವಿತಾ ಮತ್ತು ಸೀರೋಗ ತಜ್ಞೆ ಡಾ. ಕೆ.ಕೆ. ತೇಜಸ್ವಿನಿ ನೇತೃತ್ವದ ತಜ್ಞರ ತಂಡವು ಶಸಚಿಕಿತ್ಸೆಯನ್ನು ನಡೆಸಿ 7.4 ಕೆಜಿ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದೆ. ಚಿಕಿತ್ಸೆ ನಂತರ ರೋಗಿ ಚೇತರಿಸಿಕೊಂಡಿದ್ದು, ನೋವುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಪ್ರಕರಣವು ಮಹಿಳೆಯರಲ್ಲಿ ನಿಯಮಿತ ಆರೋಗ್ಯ ತಪಾಸಣೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಇದರಿಂದ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸರಳ ಚಿಕಿತ್ಸೆ ಮೂಲಕವೇ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸಿ. ಸವಿತಾ ತಿಳಿಸಿದ್ದಾರೆ.