ಸೂಪರ್ ಮಾರ್ಕೆಟ್ ನಲ್ಲಿ ವ್ಯಾನಿಟಿ ಬ್ಯಾಗ್ ಕತ್ತರಿಸಿ ಮಹಿಳೆಯ ನಗ-ನಾಣ್ಯ ಕಳವು‌‌ ಮಾಡಿದ ಖದೀಮರು

crime
Published on


ಕಲಬುರಗಿ ನಗರದ ಸೂಪರ್ ಮಾರ್ಕೇಟ್‌ನಲ್ಲಿ  ಬಟ್ಟೆ ಖರೀದಿಸಲು ಬಂದಿದ್ದ ಮಹಿಳೆಯ ವ್ಯಾನಿಟಿ ಬಾಗಿನ ಒಂದು ಕಡೆ ಕತ್ತರಿಸಿ ಅದರಲ್ಲಿದ್ದ ೧೫ ಗ್ರಾಂ ಚಿನ್ನಾಭರಣ ಹಾಗೂ ೨೦ ಸಾ.ರೂ.ನಗದು ಕಳವು ಮಾಡಿದ ಘಟನೆ ನಡೆದಿದೆ. ವಿಜಯಪುರದ ರೀಟಾ ಚವ್ಹಾಣ ಎಂಬುವರಿಗೆ ಸೇರಿದ ನಗ-ನಾಣ್ಯ ಕಳವು ಮಾಡಲಾಗಿದೆ. ತವರು ಮನೆಗೆ ಬಂದಿದ್ದರು. ಈ ವೇಳೆಯಲ್ಲಿ ಪೋಷಕರ ಜತೆಗೂಡಿ ಮಾರ್ಕೇಟ್‌ಗೆ ಹೋಗಿದ್ದಾಗ ಘಟನೆ ನಡೆದಿದೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net