ಕೃಷ್ಣಮೂರ್ತಿ ಮಂಜರು ಸಮಾಜಕ್ಕೆ ಮಾದರಿ

vandse
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೈಂದೂರು ಕ್ಷೇತ್ರದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅವರು ಏಳು ಸರ್ಕಾರಿ ಶಾಲೆಗಳನ್ನು ದತ್ತು ತಗೆದುಕೊಂಡು ಮೂಲಸೌಕರ್ಯ ಅಭಿವೃದ್ಧಿ, ಗೌರವ ಶಿಕ್ಷಕರ ನೇಮಿಸುವ ಮೂಲಕ ಶಾಲೆಗಳ ಅಭಿವೃದ್ಧಿಪಡಿಸಿ ಮಾದರಿಯಾಗಿದ್ದಾರೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು ಶುಭಹಾರೈಸಿದರು. ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಕ್ರೀಡಾಪಟು ಗುರುರಾಜ್ ಪೂಜಾರಿ ಜಡ್ಡು ಸ್ವಸ್ತಿವಾಚನ ಮಾಡಿದರು. ಉದಯ ಕುಮಾರ ಶೆಟ್ಟಿ, ಶಶಿಕಲಾ ಎಸ್, ಸುಶೀಲಾ, ರಾಜೇಶ ಕಾರಂತ್, ಕೆ.ಪ್ರಸನ್ನಕುಮಾರ ಶೆಟ್ಟಿ, ಡಾ.ರಾಜೇಶ್ ಬಾಯರಿ, ಗುಂಡು ಪೂಜಾರಿ, ರಾಜೀವ ವಂಡ್ಸೆ, ವಿದ್ಯಾರ್ಥಿ ನಾಯಕಿ ಆರಾಧ್ಯಾ, ಎಎಸ್‌ಡಿಎಂಸಿ ಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ಡಾ.ಪೂರ್ಣಿಮಾ ಟಿ.ಸ್ವಾಗತಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಸದಾಶಿವ ವರದಿ ವಾಚಿಸಿದರು. ನಾಗವೇಣಿ ಬಹುಮಾನಿತರ ಪಟ್ಟಿ, ಶೈಲಶ್ರೀ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಂದೇಶ ಶೆಟ್ಟಿ ವಂದಿಸಿದರು. ಪ್ರತಾಪಕುಮಾರ್ ಶೆಟ್ಟಿ, ಸುಧಾಕರ ನಿರೂಪಿಸಿದರು.

ಸನ್ಮಾನ, ಗೌರವಾರ್ಪಣೆ

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೀತಾರಾಮ ಜಿ ಪೂಜಾರಿ, ವಂಡ್ಸೆ ಶಾಲೆಯಲ್ಲಿ ಸೇವೆ ಸಲ್ಲಿಸಿ ಸಿ.ಆರ್.ಪಿ ಆಗಿ ಕರ್ಕುಂಜೆ ಕ್ಲಸ್ಟರ್‌ಗೆ ವರ್ಗಾವಣೆಗೊಂಡ ರವಿಚಂದ್ರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net