

* ವಂದೇ ಭಾರತ್ ಎಕ್ಸ್ಪ್ರೆಸ್ಗೆ ತುಮಕೂರಿನಲ್ಲು ಸ್ಟಾಪ್ * ಎಕ್ಸಿಕ್ಯುಟಿವ್ ಕ್ಲಾಸ್ನಲ್ಲಿ 825 ರೂ.,
ತುಮಕೂರು: ವಂದೇ ಭಾರತ್ ರೈಲು ಎರಡು ನಿಮಿಷ ಕಾಲ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಿಲ್ಲಲಿದೆ. ಕೇವಲ 75 ನಿಮಿಷದಲ್ಲಿ ತುಮಕೂರಿನಿಂದ ಬೆಂಗಳೂರು ತಲುಪಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಶುಕ್ರವಾರ ಸಂಜೆ 6.20ಕ್ಕೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಸಿರುನಿಶಾನೆ ತೋರಿದರು. ತುಮಕೂರು&ಬೆಂಗಳೂರಿಗೆ ತೆರಳಲು ಎಸಿ ಚೇರ್ ಕಾರ್ನ ಟಿಕೆಟ್ ದರ 440 ರೂ., ಹಾಗೂ ಎಕ್ಸಿಕ್ಯುಟಿವ್ ಕ್ಲಾಸ್ ಟಿಕೆಟ್ ದರ 825 ರೂ., !
ವಾರದಲ್ಲಿ 6 ದಿನ ಓಡಾಟ: ಬೆಂಗಳೂರು&ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಾರದಲ್ಲಿ 6 ದಿನ ಓಡಾಡಲಿದೆ. ಈ ರೈಲು ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇತ್ತು. ಇದೀಗ ತುಮಕೂರಿನಲ್ಲು 2 ನಿಮಿಷಗಳ ಕಾಲ ನಿಲುಗಡೆ ಇರಲಿದೆ. ಬೆಳಗ್ಗೆ 5.45 ಬೆಂಗಳೂರು ಬಿಡುವ ರೈಲು 6.32ಕ್ಕೆ ತುಮಕೂರು ತಲುಪಲಿದೆ. ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ.
ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಡುವ ವಂದೇಭಾರತ್ ರೈಲು ಸಂಜೆ 6.18ಕ್ಕೆ ತುಮಕೂರು ತಲುಪಲಿದೆ.
ದೇಶೀ ನಿರ್ಮಿತ ಸೂಪರ್ ಾಸ್ಟ್ ಎಕ್ಸ್ಪ್ರೆಸ್ ವಂದೇ ಭಾರತ್ ರೈಲು ಹಲವು ವಿಶ್ವ ದರ್ಜೆಯ ವೈಶಿಷ್ಟ$್ಯಗಳನ್ನು ಹೊಂದಿದ್ದಯ ಉತ್ತಮ ಪ್ರಯಾಣದ ಸೌಕರ್ಯದ ಜತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತುಕೊಡಲಾಗಿದೆ. ಈ ರೈಲಿನ ಎಲ್ಲಾ ಬೋಗಿಗಳು ಎಸಿ ಚೇರ್ ಕಾರ್ನದ್ದಾಗಿದೆ. ಜತೆಗೆ ಎಕ್ಸಿಕ್ಯುಟಿವ್ ಕ್ಲಾಸ್ ಬೋಗಿಗಳು ಸಹ ಇರಲಿವೆ. ಇದಲ್ಲದೆ, ಎಲ್ಲಾ ಕೋಚ್ಗಳು ಸ್ವಯಂಚಾಲಿತ ಬಾಗಿಲುಗಳು, ಅತ್ಯಂತ ಆರಾಮದಾಯಕ ಆಸನಗಳ ಸೌಲಭ್ಯ ಇದೆ.
ಆಡಿಯೋ-ವಿಶುವಲ್ ವ್ಯವಸ್ಥೆ: ಇದರ ಜತೆಗೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮಾಹಿತಿಗಾಗಿ ಜಿಪಿಎಸ್ ಆಧಾರಿತ ಆಡಿಯೋ&ವಿಶುವಲ್ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಎಕ್ಸಿಕ್ಯುಟಿವ್ ಕ್ಲಾಸ್ ಬೋಗಿಗಳಲ್ಲಿ ರೋಟೇಟಿಂಗ್ ಚೇರ್ ವ್ಯವಸ್ಥೆ ಇರಲಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ತುಮಕೂರಿನಲ್ಲಿ ಹಸಿರುನಿಶಾನೆ ತೋರಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ರೈಲ್ವೆ ಇಲಾಖೆ ಸಮಗ್ರ ಬದಲಾವಣೆ ಕಂಡಿದೆ. 2019&14ರವರೆಗೆ ರಾಜ್ಯ ರೈಲ್ವೆ ಯೋಜನೆಗಳಿಗೆ ಕೇವಲ 800 ಕೋ.ರೂ., ಅನುದಾನ ನೀಡಲಾಗಿದ್ದು ಕಳೆದ 10 ವರ್ಷಗಳಲ್ಲಿ 9 ಪಟ್ಟು ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7500 ಕೋ.ರೂ., ಅನುದಾನ ಹರಿದುಬಂದಿದೆ ಎಂದರು.
ವಿ.ಸೋಮಣ್ಣ ಪಯಣ
ತುಮಕೂರಿನಿಂದ ಯಶವಂತಪುರ ರೈಲ್ವೆ ನಿಲ್ದಾಣದವರೆಗೆ ಸಚಿವ ಸೋಮಣ್ಣ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಪಯಣಿಸಿದರು. ಈ ವೇಳೆ ಜೆಡಿಎಸ್ ಶಾಸಕಾಂಗ ನಾಯಕ ಸಿ.ಬಿ.ಸುರೇಶ್ಬಾಬು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಎಂ.ಟಿ.ಕೃಷ್ಣಪ್ಪ, ಆರ್.ರಾಜೇಂದ್ರ, ಎನ್.ರವಿಕುಮಾರ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಮಸಾಲೆ ಜಯರಾಂ ಮತ್ತಿತರರು ಸಾಥ್ ನೀಡಿದರು.
ಟಿಕೆಟ್ ದರ
ಎಲ್ಲಿಂದ
ತುಮಕೂರು- ದಾವಣಗೆರೆ - ಚೇರ್ ಕಾರ್ - 825 ರೂ.,
ಎಕ್ಸಿಕ್ಯುಟಿವ್ ಕ್ಲಾಸ್ - 1540 ರೂ.,
ತುಮಕೂರು- ಹುಬ್ಬಳ್ಳಿ - ಚೇರ್ ಕಾರ್ - 1040 ರೂ.,
ಎಕ್ಸಿಕ್ಯುಟಿವ್ ಕ್ಲಾಸ್ - 1980 ರೂ.,
6 ಗಂಟೆ 25 ನಿಮಿಷದಲ್ಲಿ 489 ಕಿ.ಮೀ., ಕ್ರಮಿಸಲಿದೆ ವಂದೇಭಾರತ್
ಧಾರವಾಡದಿಂದ ಬೆಂಗಳೂರು ನಡುವೆ ಸಂಚರಿಸಿರುವ ವಂದೇ ಭಾರತ್ ರೈಲು ಮಧ್ಯಾಹ್ನ 1.15ಕ್ಕೆ ಹೊರಡಲಿದ್ದು ಸಂಜೆ 7.45ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಡಲಿದ್ದು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. 489 ಕಿ.ಮೀ., ದೂರವನ್ನು ಕೇವಲ 6 ಗಂಟೆ 25 ನಿಮಿಷದಲ್ಲಿ ಕ್ರಮಿಸಲಿರುವ ವಂದೇ ಭಾರತ್ ಬೆಂಗಳೂರು ಬಿಟ್ಟ ನಂತರ ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮಾತ್ರ ನಿಲುಗಡೆಯಾಗುತ್ತಿತ್ತು. ಇದೀಗ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರತಿನಿಧಿಸುವ ತುಮಕೂರು ಲೋಕಸಭಾ ಕ್ಷೇತ್ರದ ಜಿಲ್ಲಾಕೇಂದ್ರ ತುಮಕೂರಿನಲ್ಲಿ ವಂದೇ ಭಾರತ್ ನಿಲ್ಲಲಿದೆ.