ಅನಂತಪುರದಲ್ಲಿ ವಂದೇ ಭಾರತ್ ಕೋಚ್ ಫ್ಯಾಕ್ಟರಿ : ಬರ್ತ್, ಶೌಚಗೃಹದ ಬಾಗಿಲುಗಳು ತಯಾರಿ

Published on

ಕುಂಬಳೆ: ವಂದೇಭಾರತ್ ರೈಲಿನ ಕೋಚ್‌ಗಳಿಗೆ ಬೇಕಾಗುವ, ಶೌಚಗೃಹದ ಬಾಗಿಲುಗಳು, ಬರ್ತ್‌ಗಳು ಇನ್ನು ಮುಂದೆ ಕಾಸರಗೋಡಿನ ಅನಂತಪುರದಲ್ಲಿ ಸಿದ್ಧವಾಗಲಿವೆ.

ಪಂಜಾಬ್ ಖನ್ನಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮ್ಯಾಗ್ನಸ್ ಫ್ಲೈವುಡ್ಸ್ ಕಂಪನಿ ಕಾಸರಗೋಡು ಜಿಲ್ಲಾ ಕೈಗಾರಿಕಾ ಕೇಂದ್ರದ ಅನಂತಪುರಂ ಕೈಗಾರಿಕಾ ಪಾರ್ಕ್‌ನಲ್ಲಿ ಸ್ಥಾವರ ನಿರ್ಮಿಸಲಿದೆ. ಇದಕ್ಕಾಗಿ ಕೈಗಾರಿಕೆ ಇಲಾಖೆಯೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಅಲ್ಲದೆ ಹಲಗೆ ತಯಾರಿಸುವ ಉತ್ತರ ಭಾರತದ ಎರಡು ಕಂಪನಿಗಳೂ ಅನಂತಪುರದಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸುತ್ತಿವೆ.

ಚೇರ್ ಕಾರ್ ಇರುವ ವಂದೇ ಭಾರತ್ ರೈಲುಗಳನ್ನು ಸ್ಲೀಪರ್ ಕೋಚ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಆಸನಗಳ ಸಂಖ್ಯೆಯೂ ಹೆಚ್ಚಲಿವೆ. ಬರ್ತ್‌ಗಳು ಸೇರಿದಂತೆ ಹೆಚ್ಚುವರಿ ಫ್ಲೈವುಡ್ ಬೋರ್ಡ್ ನಿರ್ಮಾಣಗೊಳ್ಳಲಿದೆ. ಅನಂತಪುರದಲ್ಲಿ ನಿರ್ಮಾಣಗೊಳ್ಳುವ ಫ್ಯಾಕ್ಟರಿ ಮೂಲಕ ಬೋರ್ಡ್‌ಗಳನ್ನು ವಿತರಿಸಲಾಗುವುದು ಎಂದು ಮ್ಯಾಗ್ನಸ್ ಫ್ಲೈವುಡ್ಸ್ ಮಾಲೀಕ ಮಹೇಶ್ ಗುಪ್ತಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net