ಪ್ರಕೃತಿ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳ : ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಅಭಿಮತ

New Project (24)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜಾಗತಿಕ ತಾಪಮಾನ ಹೆಚ್ಚಲು ಪ್ರಕೃತಿ ನಾಶವೇ ಮುಖ್ಯ ಕಾರಣವಾಗಿದ್ದು, ಇದನ್ನು ಕಡಿಮೆ ಮಾಡಲು ಸಸಿಗಳನ್ನು ನೆಟ್ಟು ಪ್ರಕೃತಿಯನ್ನು ಸಂರಕ್ಷಿಸುವುದೇ ಈಗಿರುವ ಏಕೈಕ ಮಾರ್ಗ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಸಬೇಕಾದ ಅಗತ್ಯವಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಹೇಳಿದರು.

ಬೆಳ್ತಂಗಡಿ ಸಾಮಾಜಿಕ ಅರಣ್ಯ ಇಲಾಖೆ, ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಬೆಳ್ತಂಗಡಿ ಸಿರಿ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಿರಿ ಕೇಂದ್ರ ಕಚೇರಿಯಲ್ಲಿ ‘ವನಮಹೋತ್ಸವ’ ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸಿರಿ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಪೈ ವನಮಹೋತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಸಿರಿ ಕ್ಲಬ್ ಅಧ್ಯಕ್ಷೆ ಹರ್ಷಿತಾ ಉಪಸ್ಥಿತರಿದ್ದರು. ಸಿಇಒ ಪ್ರಸನ್ನ ಯು. ಸ್ವಾಗತಿಸಿದರು. ಸಾಮಾಜಿಕ ಅರಣ್ಯ ಇಲಾಖೆ ಉಪವಲಯಾರಣ್ಯಾಧಿಕಾರಿ ಅಶೋಕ್ ಪ್ರಸ್ತಾವಿಸಿದರು. ಆಹಾರ ಗೊದಾಮು ಜಿ.ಎಂ.ಜೀವನ್ ಕುಮಾರ್, ಸಿರಿ ಕ್ಲಬ್ ಕೋಶಾಧಿಕಾರಿ ಸತೀಶ್ ನಿರೂಪಿಸಿದರು. ಸಿರಿ ಕ್ಲಬ್ ಅಧ್ಯಕ್ಷೆ ಹರ್ಷಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net