ಸಹಕಾರಿ ಸಂಘಗಳಿಂದ ಉತ್ತಮ ವ್ಯವಹಾರ : ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅನಿಸಿಕೆ

New Project (18)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಅವಿಭಜಿತ ದ.ಕ ಜಿಲ್ಲೆಯಲ್ಲಿ ಎಲ್ಲೂ ಸಹಕಾರಿ ಸಂಘಗಳು ಸೋತಿಲ್ಲ. ಪ್ರತಿಯೊಂದು ಸಂಘವೂ ಲಾಭದಲ್ಲಿದ್ದು, ಜತೆಗೆ ಉತ್ತಮವಾಗಿ ವ್ಯವಹಾರ ನಡೆಸುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಬಿ.ಸಿ.ರೋಡಿನ ಕೈಕಂಬದಲ್ಲಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಅಕ್ಷಯ ಸೌಧ ಉದ್ಘಾಟಿಸಿ ಮಾತನಾಡಿ, ಹಣದ ದೃಷ್ಟಿಯಲ್ಲಿ ವ್ಯವಹಾರ ನಡೆಸದೆ ರೈತರಿಗಾಗಿಯೂ ಸಂಸ್ಥೆ ಕಾರ್ಯನಿರ್ವಹಿಸಬೇಕು ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ದೀಪ ಪ್ರಜ್ಬಲಿಸಿದ ಬಳಿಕ ಮಾತನಾಡಿ, ಮನುಷ್ಯನ ಜೀವನವೇ ಸಹಕಾರ ತತ್ವದಲ್ಲಿ ನಡೆಯುತ್ತಿದೆ. ರಾಜ್ಯದಲ್ಲೇ ಶ್ರೇಷ್ಠಮಟ್ಟದಲ್ಲಿ ಸಹಕಾರಿ ಸಂಘಗಳು ಬೆಳೆಯುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಜನಸಾಮಾನ್ಯರೊಂದಿಗೆ ಸಹಕಾರಿ ಕ್ಷೇತ್ರ ನಿಕಟ ಸಂಬಂಧ ಇರಿಸಿಕೊಂಡಿದೆ ಎಂದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಗಣಕೀಕೃತ ವ್ಯವಸ್ಥೆ ಉದ್ಘಾಟಿಸಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಸೇಫ್ ಲಾಕರ್ ಉದ್ಘಾಟಿಸಿದರು. ಪುರಸಭಾ ಸದಸ್ಯ ಗೋವಿಂದ ಪ್ರಭು ಜಿ.ಆನಂದ ಸಭಾಂಗಣ ಉದ್ಘಾಟಿಸಿದರು. ಶಾರದಾ ಜಿ.ಆನಂದ ಸಭಾಭವನ ಉದ್ಘಾಟಿಸಿದರು. ಮಾಜಿ ಅಧ್ಯಕ್ಷ ಜಿ.ಆನಂದ ಅವರನ್ನು ಸ್ಮರಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಕರುಣೇಂದ್ರ ಪೂಜಾರಿ ಕೊಂಬರಬೈಲು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಂ ಭಟ್, ಪ್ರಮುಖರಾದ ಜಯಂತಿ ವಿ.ಬಂಗೇರ, ಅರುಣ್ ರೋಷನ್ ಡಿಸೋಜ, ಜ್ಯೋತಿ ಡಿ., ವಿಠಲ ಪೂಜಾರಿ, ಲಕ್ಷ್ಮೀ ವಿ.ಪ್ರಭು, ಹರೀಶ್, ಜಯಕುಂದರ್, ಮುರಳೀಧರ ಭಟ್, ಚಂದ್ರಶೇಖರ್ ಭಂಡಾರಿ, ದಿವಾಕರ ಶೆಟ್ಟಿ, ಪದ್ಮನಾಭ ಗೌಡ, ಗಣೇಶ್, ಜಯಂತಿ ಉಪಸ್ಥಿತರಿದ್ದರು. ಆದಿರಾಜ್ ಜೈನ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ ವರದಿ ವಾಚಿಸಿದರು. ಬಿ. ಸದಾಶಿವ ಶೆಣೈ ವಂದಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.

ಹಲವು ಗಣ್ಯರಿಗೆ ಗೌರವಾರ್ಪಣೆ

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಮಾಜಿ ಅಧ್ಯಕ್ಷ ಪದ್ಮನಾಭ ದೇವಾಡಿಗ, ಶಾರದಾ ಜಿ.ಆನಂದ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸುಧಾಕರ ಕೆ.ಟಿ. ಹರೀಶ, ನವೀನ ಸೇಸಗುರಿ ಅವರನ್ನು ಗೌರವಿಸಲಾಯಿತು. ಅತಿಥಿಗಳು ಶೇರು ಪತ್ರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net