

ವಿಜಯವಾಣಿ ಸುದ್ದಿಜಾಲ ಶಂಕರನಾರಾಯಣ
ಜೀವನದ ಅನುಭವದಲ್ಲಿ ಮೌಲ್ಯಗಳು ಸದಾ ತುಂಬಿರುತ್ತವೆ. ಅವುಗಳನ್ನು ಕಂಡುಕೊಳ್ಳುವುದು ನಮ್ಮ ಕರ್ತವ್ಯ. ಬದುಕಿನ ಯಶಸ್ಸಿಗೆ ಮೌಲ್ಯಗಳೇ ಅಡಿಪಾಯ. ಜೀವನ ಮೌಲ್ಯ ದಿನನಿತ್ಯದ ವಿದ್ಯಾಮಾನಗಳಲ್ಲಿ ತುಂಬಿರುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಅನುಸರಿಸುವ ಕೆಲಸ ಮಾಡಬೇಕು. ಗುರು ಹಿರಿಯರು, ತಂದೆ- ತಾಯಿಯನ್ನು ಗೌರವದಿಂದ ಕಾಣುವ ಆದರ್ಶ ಬೆಳೆಸಿಕೊಳ್ಳಬೇಕು ಎಂದು ಉಡುಪಿ ಸಾಹಿತಿ ಸಂಧ್ಯಾ ಶೆಣೈ ಹೇಳಿದರು.
ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇಡಿಮನೆ ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆದ ಪ್ರೇರಣಾ ಸರಣಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿದರು. ನೆರಳು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಧಾಕೃಷ್ಣ ಕ್ರಮಧಾರಿ, ಟ್ರಸ್ಟ್ ಸದಸ್ಯ ರಾಜೀವ ಪೂಜಾರಿ, ಭಾಸ್ಕರ ಪೂಜಾರಿ, ಶಂಕರನಾರಾಯಣ ಯು.ಕೆ.ಇನ್‌ೆಟೆಕ್ ಉದಯ ಶೆಟ್ಟಿ ಉಪಸ್ಥಿತರಿದ್ದರು. ಡಾ.ವಸಂತ ಜಿ. ಸ್ವಾಗತಿಸಿದರು. ಸುಮ, ಐಶ್ವರ್ಯ ಪ್ರಾರ್ಥಿಸಿದರು. ಕೆ.ರಾಧಾಕೃಷ್ಣ ಕ್ರಮಧಾರಿ ಪ್ರಾಸ್ತಾವಿಕ ಮಾತನಾಡಿದರು. ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಮಹಾಲಿಂಗಪ್ಪ ವಂದಿಸಿದರು.