ಮೌಲ್ಯ ಅನಾವರಣದ ರಂಗ ಪ್ರಯೋಗ

Published on

ನೀನಾಸಂ ತಿರುಗಾಟ ಹೆಗ್ಗೋಡು ಅಭಿನದ ಹೃದಯದ ತೀರ್ಪು ನಾಟಕ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಮೌಲ್ಯಗಳ ಅನಾವರಣ ಮಾಡುವ ರಂಗ ಪ್ರಯೋಗಗಳು ಆಗಿಂದಾಗೆ ನಡೆಯುತ್ತಿದ್ದರೇ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಎನ್​.ಎಚ್​.ಶಿವಶಂಕರ ರೆಡ್ಡಿ ತಿಳಿಸಿದರು.

ನಗರದ ಡಾ.ಎಚ್​.ಎನ್​.ಕಲಾಭವನದಲ್ಲಿ ಆಯೊಜಿಸಿದ್ದ ಗೌತಮ ಬುದ್ಧ ಸಾಮಾಜಿಕ, ಸಾಂಸತಿಕ ಸಂಘ ಇಡಗೂರು ಆಯೋಜಿಸಿದ್ದ ನೀನಾಸಂ ತಿರುಗಾಟ ಹೆಗ್ಗೋಡು ಅಭಿನದ ಹೃದಯದ ತೀರ್ಪು ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾನುಮಸ್ತಾಕ್​ ಅವರ ಕಥೆ, ಡಾ.ಎಂ.ಗಣೆೇಶ್​ ನಿರ್ದೇಶನದ ತಾಯಿ ಸೊಸೆ ಮಗ ನಡುವೆ ನಡೆಯುವ ಕಥಾ ವಸ್ತು. ಮೌಲ್ಯ ಮತ್ತು ಮಾನವೀಯ ತೊಳಲಾಟಗಳ ನಡುವೆ ಕಥಾವಸ್ತು ಸಾಗುತ್ತದೆ. ಹೆಣ್ಣಿನ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುವತ್ತ ಮುಸ್ಲಿಂ ಸಮುದಾಯದ ಸಾಂಸತಿಕ ಪರಿಸರದೊಳಗೆ ರಂಗ ಪ್ರಯೋಗ ನಡೆಯುತ್ತದೆ. ಇದು ಸಂಬಂಧ ಗಟ್ಟಿಗೊಳಿಸುವ ಪ್ರಯತ್ನವಾಗಿದೆ ಎಂದರು.

ನಗರಸಭೆ ಮಾಜಿ ಸದಸ್ಯ ಜಿ.ಬಾಲಾಜಿ ಮಾತನಾಡಿ, ನಾಟಕದಿಂದ ಜನರ ಪ್ರಜ್ಞೆಯು ಹೆಚ್ಚಾಗುವುದರಿಂದ ಪ್ರಜ್ಞಾವಂತ ಸಮಾಜ ಕಟ್ಟಬಹುದು. ಅನೇಕ ಚಳವಳಿಗಳು ನಾಟಕದ ಮೂಲಕ ಜನಸಾಮಾನ್ಯರನ್ನು ತಲುಪಿದೆ. ಅದರಲ್ಲೂ ಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ನಾಟಕ ಪ್ರಮುಖ ಪಾತ್ರ ವಹಿಸಿದೆ ಎಂದರು. ಕಲಾವಿದರಾದ ಅಭಿಷೇಕ, ಅಶೋಕ್​ ಕುಮಾರ್​, ಕೃಷ್ಣ ಬಡಿಗೇರ, ಚೇತನ, ನಿಖಿಲ್​, ಮಣಿ, ಮಹಾಂತೇಶ್​, ಯಶವಂತ, ಯೋಗೀಶ್​ ನಾಯಕ್​, ರಾಜೇಂದ್ರ, ಸುಶ್ಮಿತಾ ಭಾಗವಹಿಸಿ ಅತ್ಯಂತ ಮನೋಜ್ಞವಾಗಿ ನಾಟಕ ಮೂಡಿಬಂದಿತು.ಆರ್​.ವೀರಣ್ಣ ಶ್ರೀರಂಗಚಾರಿ, ಇಡಗೂರು ಪ್ರಸನ್ನ ಕುಮಾರ್​, ಪ್ರಕಾಶ್​ ರೆಡ್ಡಿ ಸೋಮಯ್ಯ ಡಿಪಾಳ್ಯ ಕಾಂತರಾಜು ಸಪ್ತಗಿರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net