

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಬೇಸಿಗೆ ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಿನನಿತ್ಯ ತಾಯಿ, ಗುರು ಹಿರಿಯರನ್ನು ಗೌರವಿಸುವುದು, ಪ್ರಾಣಿ, ಪಕ್ಷಿ, ಪ್ರಕೃತಿಗೆ ಗೌರವ ಕೊಡುವ ಪರಿಪಾಠ ನಮ್ಮದಾದಾಗ ಬದುಕು ಸಾರ್ಥಕವಾಗುತ್ತದೆ ಎಂದು ಧಾರ್ಮಿಕ ಚಿಂತಕ ಪ್ರಕಾಶ್ ಮಲ್ಪೆ ಹೇಳಿದರು.
ಈಶಪ್ರಿಯತೀರ್ಥ ಶ್ರೀಪಾದರ ಸಂಕಲ್ಪದಂತೆ ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಚಾರಿಟೆಬಲ್ ಟ್ರಸ್ಟ್ ಮೂಲಕ ಶಾಂತಿನಿಕೇತನದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಮೌಲ್ಯಯುತ ಸಂಸ್ಕಾರ ಶಿಕ್ಷಣ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು.
ಧಾರ್ಮಿಕ ಚಿಂತಕ ಓಂ ಪ್ರಕಾಶ್ ಭಟ್, ಶಾಂತಿನಿಕೇತನ ವಿದ್ಯಾರ್ಥಿ ಘಟಕದ ಚೈತನ್ಯ ಮಾತನಾಡಿದರು.
ಅದಮಾರು ಮಠದ ವತಿಯಿಂದ ಶಿಬಿರಾರ್ಥಿಗಳಿಗೆ ಪುಸ್ತಕ, ಸ್ವಾಮೀಜಿಯವರ ಅನುಗ್ರಹ ಮಂತ್ರಾಕ್ಷತೆ ನೀಡಿ ಗೌರವಿಸಲಾಯಿತು. ಹೆತ್ತವರನ್ನು ಸನ್ಮಾನಿಸಲಾಯಿತು. ಶಿಬಿರದ ಗುರುಗಳಾದ ವಾಣಿ, ಲಲಿತಾ ಕೆ., ಮೋಹನ್ ರಾವ್, ಸುಕುಮಾರ್, ದೀಪ ಗೋವಿಂದ ರಾಜ್, ಕೆ.ಗುರುರಾಜ್ ಭಟ್, ರೂಪಾ ಓಂ ಪ್ರಕಾಶ್ ಭಟ್, ಓಂ ಪ್ರಕಾಶ್ ಭಟ್, ವ್ಯವಸ್ಥಾಪಕ ಗೋವಿಂದರಾಜು ಅವರನ್ನು ಗೌರವಿಸಲಾಯಿತು.