

ರಾಮದುರ್ಗ: ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ಅವರ ತತ್ತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಬದುಕಿನಲ್ಲಿ ಬದಲಾವಣೆಯಾಗಲು ಸಾಧ್ಯ ಎಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಸಮುದಾಯದ ಸಂಯುಕ್ತಾಶ್ರಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸತ್ಸಂಗ, ಸದ್ವಿಚಾರ ಮೂಲಕ ಪರಿವರ್ತನೆಯಾದ ಮಹರ್ಷಿ ವಾಲ್ಮೀಕಿ ಅವರು ಮಹಾನ್ ಗ್ರಂಥ ರಾಮಾಯಣ ಕೊಡುಗೆಯಾಗಿ ನೀಡಿದ್ದಾರೆ. ಶರಣರು ಹಾಗೂ ಮಹಾತ್ಮರ ಸದಾಶಯ ಈಡೇರಿಸಲು ಯುವ ಸಮುದಾಯ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ ಎಸ್.ಎಂ.ದಿವಟಗಿ, ಮಹರ್ಷಿ ವಾಲ್ಮೀಕಿ ಅವರ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಮುನ್ನ ಪಟ್ಟಣದ ತಾಪಂ ಕಚೇರಿಯಲ್ಲಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹಾಗೂ ವಿರಕ್ತಮಠ ಟ್ರಸ್ಟ್ ಅಧ್ಯ ಪ್ರದಿಪ ಪಟ್ಟಣ ಚಾಲನೆ ನೀಡಿದರು. ಸುಮಂಗಲೆಯರ ಕುಂಭ ಹಾಗೂ ವಿವಿಧ ವಾಧ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.
ವಾಲ್ಮೀಕಿ ಸಮುದಾಯದ ತಾಲೂಕು ಸಮಿತಿ ಅಧ್ಯ ಪ್ರಕಾಶ ತಳವಾರ, ಗೌರವಾಧ್ಯ ಲಕ್ಷಿ$್ಮನಾರಾಯಣಸ್ವಾಮಿ ಇನಾಮದಾರ, ಉಪಾಧ್ಯ ಬಸವರಾಜ ಪೂಜೇರ, ಕಾರ್ಯದರ್ಶಿ ಮಂಜುನಾಥ ಹನಸಿ, ಧನಲಕ್ಷಿ$್ಮ ಶುಗರ್ಸ್ ನಿರ್ದೇಶಕ ಭೀಮಪ್ಪ ಬಸಿಡೋಣಿ, ಮುಖಂಡರಾದ ಕಾಳಪ್ಪ ಹೂವನ್ನವರ, ಮಾರುತಿ ಪೂಜೇರ, ಚುರಚಪ್ಪ ಮಡ್ಡಿನಾಯ್ಕರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತ ವಕ್ಕುಂದ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯಕುಮಾರ, ಬಿಇಒ ಸುರೇಂದ್ರ ಕಾಂಬಳೆ ಇತರರಿದ್ದರು.