ಫೆಬ್ರವರಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ

valmiki
Published on

ರಾಮನಗರ

ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ 2025ರ ಫೆಬ್ರವರಿ 8, 9 ರಂದು ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

ರಾಮನಗರದ ಚೈತನ್ಯ ಭವನದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಯುವ ಘಟಕದಿಂದ  ಏರ್ಪಡಿಸಿದ್ದ 7ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿ, ವಾಲ್ಮೀಕಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಕೇವಲ ಜಾತ್ರೆ ಉತ್ಸವಾದಿಗಳಿಗಷ್ಟೇ ಸೀಮಿತವಾಗಿರದೇ, ಸಮುದಾಯದ ಜಾಗೃತಿ ಜಾತ್ರೆಯಾಗಿ ನಡೆಯಲಿದೆ. ರಾಜ್ಯದ ವಿವಿಧ ಮಠಾಧೀಶರು, ಸಿನಿಮಾ ನಟರು, ರಾಜಕಾರಣಿಗಳು, ರೈತ ಮುಖಂಡರು, ಸಾಹಿತಿಗಳು, ಹೋರಾಟಗಾರರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಸರ್ಕಾರದ ಜನಪ್ರತಿನಿಧಿಗಳು ಹಾಜರಿರುವ ಕಾರಣದಿಂದ ಸಮುದಾಯದ ಹಕ್ಕೊತ್ತಾಯ ಮತ್ತು ಬೇಡಿಕೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಜಾತ್ರಾ ಮಹೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ರಾಮನಗರದ ಸಮುದಾಯ ಮುಖಂಡರು ಭಾಗವಹಿಸಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಕಾರಣಕರ್ತರಾಗಬೇಕು ಎಂದರು.

ಜಿಲ್ಲಾ ವಾಲ್ಮೀಕಿ ಸಂದ ಅಧ್ಯಕ್ಷ ಅಂಜನಾಪುರ ವಾಸು ಮಾತನಾಡಿ, ಜಾತ್ರಾ ಮಹೋತ್ಸವ ನಮ್ಮ ಸಮಾಜದ ಹಬ್ಬದಂತೆ ಆಚರಿಸಬೇಕು. ಗಣ್ಯರು ಆಗಮಿಸುವ ಕಾರಣ ಸಮಾಜದ ಪ್ರಗತಿಗೆ ಕಾರಣವಾಗುವ ಅಂಶಗಳನ್ನು ಗಮನಕ್ಕೆ ತರಬೇಕಿದೆ. ರಾಜ್ಯ ಸರ್ಕಾರದಿಂದ ಸಮುದಾಯಕ್ಕೆ ಸಿಗಬೇಕಿರುವ ಸವಲತ್ತುಗಳು ತಲುಪುವಂತೆ ಮಾಡಬೇಕು. ಅಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

ಮುಖಂಡರಾದ ಸಿದ್ದರಾಜು, ಪಾಂಡುರಂಗ, ಜಿ.ಬಾಲಾಜಿ, ಟಿ.ವೆಂಕಟೇಶ್​, ನಾಗನಾಯಕ, ಪುಟ್ಟಸ್ವಾಮಿ, ರಾಮು, ತಿಮ್ಮನಾಯಕ, ರಮೇಶ್​, ಪೊಲೀಸ್​ ನಾಗೇಶ್​, ವೆಂಕಟಮ್ಮ, ಜಯಮ್ಮ, ತಿಮ್ಮಣ್ಣ, ರಾಮಕೃಷ್ಣನಾಯಕ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net