ವಾಲ್ಮೀಕಿ ಭವನಕ್ಕೆ ₹4 ಕೋಟಿ ಅನುದಾನ

Web 3
Published on

ಸಚಿವರಿಗೆ ವಾಲ್ಮೀಕಿ ಸಮುದಾಯದ ಮುಖಂಡರ ಅಭಿನಂದನೆ

ಚಿಂತಾಮಣಿ: ನಗರದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ 4 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಮತ್ತು ಭೂಮಿ ಮಂಜೂರು ಮಾಡಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ವಾಲ್ಮೀಕಿ ಮುಖಂಡರು ಅಭಿನಂದಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು. ಸಮುದಾಯದಿಂದ ಬೇಡಿಕೆ ಸಲ್ಲಿಸದಿದ್ದರೂ ಸಚಿವರು ಖುದ್ದು ಆಸಕ್ತಿ ವಹಿಸಿ ಸಮಾಜಕ್ಕೆ ಆಸರೆಯಾಗಬೇಕೆಂಬ ದೃಷ್ಟಿಯಿಂದ ಎರಡು ಎಕರೆ ಜಮೀನಿನ ಜತೆಗೆ 4 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದರು.

ಮಾಜಿ ಶಾಸಕರು ಅಧಿಕಾರದಲ್ಲಿದ್ದಾಗ ಜನಾಂಗದ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಬಗ್ಗೆ, ಅಧಿಕಾರಿಗಳು ಸಭೆಗಳಲ್ಲಿ ಹೀನಾಯ ಪದ ಬಳಕೆ ಮಾಡುತ್ತಿರುವ ಬಗ್ಗೆ ಅರೋಪ ಮಾಡಿದ್ದಲ್ಲದೆ, ಹತ್ತು ವರ್ಷಗಳಲ್ಲಿ ಮಾಜಿ ಶಾಸಕರು ಜನಾಂಗಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲವೆಂದು ಆರೋಪಿಸಿದರು.

ನಗರಸಭೆಯ ನಾಮ ನಿರ್ದೇಶನ ಸದಸ್ಯ ಶ್ರೀನಿವಾಸ್, ಮುಖಂಡರಾದ ಗೋಪಾಲ್, ಆನಂದ್, ಶಂಕರಪ್ಪ, ವೆಂಕಟೇಶ್, ಕೃಷ್ಣಪ್ಪ, ಸುಬ್ರಮಣಿ, ನರೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net