

ಬೆಂಗಳೂರು: ಬನ್ನೇರುಟ್ಟ ರಸ್ತೆಯ ಹುಳಿಮಾವಿನಲ್ಲಿರುವ ದಣ ಭಾರತದ ಮೊದಲ ಮಾತಾ ಶ್ರೀವೈಷ್ಣೋಮಾ ದೇವಿ ಮಂದಿರದಲ್ಲಿ 19ನೇ ವೈಷ್ಣೋಮಾ ಮಹೋತ್ಸವ ಆರಂಭವಾಗಿದೆ. ಸಹಸ್ರಾರು ಮಹಿಳೆಯರು ಕಳಸ ಹೊತ್ತು ಉತ್ಸವಮೂರ್ತಿ ಜೊತೆ ರಾಜಬೀದಿಯಲ್ಲಿ ಸಾಗಿದ್ದಾರೆ.
ವಿಶೇಷ ಪೂಜೆ, ರಥೋತ್ಸವ ಕಾರ್ಯಕ್ರಮಗಳಿಗೆ ವಿಜಯನಗರದ ಶಾಸಕ ಎಂ. ಕೃಷ್ಣಪ್ಪ, ಸಬ್ರಮಣ್ಯ ಶರ್ಮ ಸ್ವಾಮೀಜಿ, ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್, ಪೂಜ ದುಗ್ಗಲ್ ಶನಿವಾರ ಚಾಲನೆ ನೀಡಿದರು.
ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್ ಮಾತನಾಡಿ, ವೈಷ್ಣೋದೇವಿ ದೇವಸ್ಥಾನ ಕತ್ರಾದ ತ್ರಿಕುಟ ಬೆಟ್ಟದ 1,700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿಗೆ ಹೋಗಲು ಸಾಧ್ಯವಾಗದೆ ಇರುವ ಹಿರಿಯ ನಾಗರಿಕರು, ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಮೂಲ ಮಾದರಿಯ ವೈಷ್ಣೋದೇವಿಯ ಮೂರ್ತಿ ಸ್ಥಾಪಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ದೇವಸ್ಥಾನ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಮೊದಲ ವೈಷ್ಣೋದೇವಿ ದೇವಸ್ಥಾನ ಇದಾಗಿದ್ದು, 19 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದೆ. ಮೂಲ ವೈಷ್ಣೋಮಾ ದೇವಿ ಮಂದಿರದಷ್ಟೇ ಪ್ರಭಾವ ಹೊಂದಿರುವ ಇಲ್ಲಿಗೆ ಭಕ್ತ ಸಮೂಹವೇ ಹರಿದುಬರುತ್ತಿದೆ. ರಥೋತ್ಸವದ ಸಂದರ್ಭದಲ್ಲಿ ಗಣಪತಿ ಪೂಜೆ, ಪುಣ್ಯಾಹ, ರಾ ಬಂಧನ, ಕಲಶ ಸ್ಥಾಪನೆ, ನವಗ್ರಹ, ಆಂಜನೇಯ ಮತ್ತು ಮಹಾಮೃತ್ಯುಂಜಯ ಹೋಮ ನಡೆಯುತ್ತದೆ. ಜತೆಗೆ ಪಂಚರುದ್ರ, ಮಹಾಲಕ್ಷ್ಮೀ, ಕಾಲಭೈರವ, ಸುಬ್ರಹ್ಮಣ್ಯ ಸ್ವಾಮಿ ಹೋಮ ಮತ್ತು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.