

ಬೆಂಗಳೂರು : ನಗರದ ಆನಂದಪುರ ವಾರಣಾಸಿಯ ವಾಗ್ದೇವಿ ವಿಲಾಸ ಶಾಲೆಯ ವಾರ್ಷಿಕೋತ್ಸವವು ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಇಂಗ್ಲಿಷ್ ಭಾಷಾ ತರಬೇತುದಾರರಾದ ಡಾ. ಮೇಧಾ ಚಿರಂಜೀವಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಪೂರ್ವಜರ ತ್ಯಾಗ, ಪರಾಕ್ರಮಗಳ ಬಗ್ಗೆ ಹೆಮ್ಮೆ ಇರಬೇಕು. ವಿದ್ಯಾರ್ಥಿಗಳು ದೃಢ ಸಂಕಲ್ಪದಿಂದ ಹಾಗೂ ನುರಿತ ಶಿಕ್ಷಕರ ಸಹಾಯದಿಂದ ಬಹುಬೇಗ ಬೆಳೆಯಲು ಸಹಕಾರವಾಗುತ್ತದೆ. ಪಾಲಕರು ಉತ್ತಮವಾದ ಶಾಲೆಗಳ ಆಯ್ಕೆಯ ಮೂಲಕ ಅಂತಹ ಕಲಿಕಾ ವಾತಾವರಣವನ್ನು ಕಲ್ಪಿಸಬೇಕೆಂದೂ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಾಗ್ದೇವಿ ವಿಲಾಸ ಸಂಸ್ಥೆಗಳ ಅಧ್ಯಕ್ಷ ಕೆ. ಹರೀಶ್, ಸಿಇಒ ಶಾಲೆಟ್, ಪ್ರಾಂಶುಪಾಲೆ ದೇವಜಯಾ ಘೋಷ್, ಆಡಳಿತಾಧಿಕಾರಿ ಪ್ರಮೋದ್ ಭಟ್, ಉಪಪ್ರಾಂಶುಪಾಲ ರಾಘವೇಂದ್ರ ಭಟ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥತರಿದ್ದರು.