ವಡ್ಡಿ ಘಟ್ಟ ರಸ್ತೆ 2 ತಿಂಗಳು ಬಂದ್

10KWR4-Copy
Published on

ಕಾರವಾರ:ಗೋಕರ್ಣದಿಂದ ಪ್ರಾರಂಭವಾಗಿ ವಡ್ಡಿ ದೇವನಹಳ್ಳಿ ಮುಖಾಂತರ ಶಿರಸಿ ನಗರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-143 ರಲ್ಲಿ ಎಲ್ಲ ರೀತಿಯ ವಾಹನ ಸಂಚಾರವನ್ನು ಮುಂದಿನ 2 ತಿಂಗಳವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಘಟ್ಟ ಪ್ರದೇಶದಲ್ಲಿ ಎಂದರೆ 38 ಕಿಮೀಯಿಂದ 47.15 ಕಿಮೀ ನಡುವೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಈ ಆದೇಶ ಹೊರಡಿಸಲಾಗಿದೆ. ಅಂಕೋಲಾದಿಂದ ಶಿರಸಿಗೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಯಲ್ಲಾಪುರಕ್ಕೆ ತೆರಳಿ ಶಿರಸಿಗೆ ಹೋಗಬಹುದು. ಅಥವಾ ಮಿರ್ಜಾನ-ಕತಗಾಲ-ಶಿರಸಿ ಮಾರ್ಗವಾಗಿ ಸಂಚರಿಸಬಹುದು. ಯಾಣಕ್ಕೆ ಶಿರಸಿ ದೇವನಹಳ್ಳಿ ಅಥವಾ ಕತಗಾಲ ಮಾರ್ಗವಾಗಿ ತಲುಪಬಹುದು ಎಂದು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net