ಜೇವರ್ಗಿಯಲ್ಲಿ ವಚನ ದಿನಾಚರಣೆ ನಾಳೆ

IMG-20230827-WA0009
Published on

ನೂರಂದೇಶ್ವರ ಕಾಲೇಜಿಯಲ್ಲಿ ಆಯೋಜನೆ ಶಾಂತಲಿಂಗಗೌಡ  ಚನ್ನಮಲ್ಲಯ್ಯ ಮಾಹಿತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಸವಾದಿ ಶರಣರ ಕುರಿತು ಯುವ ಸಮೂಹದಲ್ಲಿ ಅರಿವು ಮೂಡಿಸುವುದರ ಜತೆಗೆ ಅವರ ತತ್ವಗಳನ್ನು ಪಾಲಿಸುವಂತೆ ಪ್ರೇರಣೆ ನೀಡಲು ಆ.೨೯ ರಂದು ಜೇವರ್ಗಿ ಪಟ್ಟಣದ ನೂರಂದೇಶ್ವರ ಪಿಯು  ಕಾಲೇಜಿನಲ್ಲಿ  ವಚನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ  ಶಾಂತಲಿAಗಗೌಡ ಪಾಟೀಲ್ ಕೋಳಕೂರ ಮತ್ತು  ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜೇವರ್ಗಿ ತಾಲೂಕು ಘಟಕದ  ವತಿಯಿಂದ  ಆಯೋಜಿಸಿರುವ ವಚನ ದಿನಾಚರಣೆಯನ್ನು ಮೋರಟಗಿ ವಿರಕ್ತಮಠ ಹಾಗೂ ಯಲಗೋಡದ ಪರಮಾನಂದೇಶ್ವರ ಮಠದ ಪೂಜ್ಯ ಗುರುಲಿಂಗ ದೇವರು ಸಾನ್ನಿಧ್ಯದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿP್ಷÀಣ ಸಂಸ್ಥೆಯ ಸಂರP್ಷÀಕ ಬಸವರಾಜ ಪಾಟೀಲï ಸೇಡಂ  ಉದ್ಘಾಟಿಸಿ ಚಾಲನೆ ನೀಡುವರು ಎಂದು ನಗರದ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಸವಾದಿ ಶರಣರ ಭಾವಚಿತ್ರಗಳಿಗೆ  ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ ಸಾಹು ಸಿರಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಯುವ ಕಾಂಗ್ರೆಸ್ ಮುಖಂಡ ವಿಜಯಕುಮಾರ ಹಿರೇಮಠ ಹುಲ್ಲೂರ ಅವರು ಸೇರಿಕೊಂಡು ಪೂಜೆ ನೆರವೇರಿಸಲಿದ್ದಾರೆ. ಕಸಾಪ ಮಾಜಿ ಅಧ್ಯಕ್ಷ  ಡಾ.ಪಿ.ಎಂ.ಮಠ, ಎಂ.ಎಸ್.ಹಿರೇಮಠ ಹಾಗೂ ಕಸಾಪ ಗೌರವ ಕಾರ್ಯದರ್ಶಿ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ ಜತೆಗೂಡಿ ಜ್ಯೋತಿ ಬೆಳಗಿಸಲಿz್ದÁರೆ ಎಂದು ಪಾಟೀಲ್ ವಿವರಿಸಿದರು.
 ಶರಣ ಸಾಹಿತಿ ಸಂತೋಷ ಹೂಗಾರ ಹಾಗೂ ಶರಣಗೌಡ ಜೈನಾಪುರ ಉಪನ್ಯಾಸ ನೀಡುವರು.  ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ  ಎಸ್.ಕೆ.ಬಿರಾದಾರ ಅಧ್ಯP್ಷÀತೆ ವಹಿಸುವರು. ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.  ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವನಿಕರು ಪಾಲ್ಗೊಳ್ಳಬೇಕು ಎಂದು ಶಾಂತಲಿAಗಪ್ಪಗೌಡ ಕೋರಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಲ್ಯಾಣಕುಮಾರ ಸಂಗಾವಿ, ಮಹಾದೇವ ಕೋಳಕೂರ, ಗೌರಿಶಂಕರ ಬಣಮಗಿ, ಬಂಗಾರೆಪ್ಪ ಆಡಿನ್. ಚಂದ್ರಶೇಖರ ತುಂಬಗಿ, ವಿರೇಶ ಕಂದಗಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net