

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಡಾ.ಶಿವಕುಮಾರಸ್ವಾಮಿ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಇತ್ತೀಚೆಗೆ ಚಿಲಕವಾಡಿ ಬೆಟ್ಟದ ಶ್ರೀಗುರುರಾಮ ಯೋಗೇಶ್ವರ ಮಠದಲ್ಲಿ ಗಾಯನ ಕಾರ್ಯಕ್ರಮಆಯೋಜಿಸಲಾಗಿತ್ತು.
ತಂಡದ ಕಲಾವಿದ ಪರಶಿವಪ್ಪ ನೇತೃತ್ವದಲ್ಲಿ ವಚನ ಗಾಯನ, ಜಾನಪದ, ಭಕ್ತಿ ಗೀತೆ, ಭಜನೆ ಕಾರ್ಯಕ್ರಮಗಳು ನಡೆದವು.
ಪರಶಿವಪ್ಪ ಮಾತನಾಡಿ, ಈಚೆಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ನಾವು ಆಲಂಗಿಸಿಕೊಂಡಿದ್ದೇವೆ. ಇದು ಸಂಗೀತ ಕ್ಷೇತ್ರವನ್ನೂ ಬಿಟ್ಟಿಲ್ಲ. ನಮ್ಮ ಮೂಲ ಬೇರು ಜಾನಪದವಾಗಿದೆ. ಈ ಸಂಗೀತಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಇದರ ಭಾಗವಾಗಿ ಭಜನೆ, ಭಕ್ತಿ, ಭಾವಗೀತೆಗಳೂ ಇದ್ದು ಇದನ್ನು ಮುಂದಿನ ಪೀಳಿಗೆಗೆ ಜೋಪಾನ ಮಾಡುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಯುವಜನರು ಇಂತಹ ಸಂಗೀತ ಕೇಳುವ, ಕಲಿಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ಕೆ.ಎಸ್.ನಾಗರಾಜು, ಬಸವಣ್ಣಾಚಾರ್, ರಾಜೇಶ್, ಬಸವಣ್ಣ ಮತ್ತಿತರರಿದ್ದರು.