

ರಾಷ್ಟಿçÃಯ ಲಸಿಕಾ ದಿನಾಚರಣೆಯಲ್ಲಿ ಕುಟುಂಬ ವೈದ್ಯ ಡಾ.ಅಮರೇಶ ಪತ್ತಾರ ಹೇಳಿಕೆ
ಕಲಬುರಗಿ:ಮಾನವನಿಗೆ ವಿವಿಧ ಕಾರಣಗಳಿಂದ ಕಾಯಿಲೆಗಳು ಬರುತ್ತವೆ. ಅವುಗಳನ್ನು ನಿವಾರಣೆ ಮಾಡಲು, ಬರದಂತೆ ತಡೆಯಲು ಮುಂಜಾಗ್ರತೆಗೆ ಲಸಿಕೆ ಪಡೆಯುವುದು ಅಗತ್ಯವಾಗಿದೆ. ಲಸಿಕೆಗಳು ಕಾಯಿಲೆಯ ವಿರುದ್ದ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಲಸಿಕೆ ಪಡೆಯುವುದರ ಬಗ್ಗೆ ಭಯ ಪಡದೆ ತೆಗೆದುಕೊಳ್ಳಬೇಕು ಎಂದು ಖ್ಯಾತ ಕುಟುಂಬ ವೈದ್ಯ ಡಾ.ಅಮರೇಶ ಪತ್ತಾರ ಹೇಳಿದರು.
ನಗರದ ಆಳಂದ ರಸ್ತೆಯ ಶಹಾಬಜಾರನ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯ ‘ಶಿವಶಕ್ತಿ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಭಾನುವಾರ ಜರುಗಿದ ‘ರಾಷ್ಟಿçÃಯ ಲಸಿಕೆ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ.ಬಸವರಾಜ ಜಿ.ಎಂ. ಮಾತನಾಡಿ, ಭಾರತ ಪೋಲಿಯೋ ಮುಕ್ತ ರಾಷ್ಟçವಾಗಿದ್ದರ ಪ್ರಯುಕ್ತ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಪಡೆದು, ಮಾರಣಾಂತಿಕ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಗರ್ಭಿಣಿಗೆ ಟಿಡಿ, ಮಗು ಹುಟ್ಟಿದ ನಂತರ ೨೪ಗಂಟೆ ಒಳಗಾಗಿ ಜೀರೋ ಪೊಲಿಯೋ ಮತ್ತು ಬಿಸಿಜಿ, ೧.೫ ತಿಂಗಳಿನ ನಂತರ ಪೆಂಟಾವೈಲೆAಟ್, ಪೊಲಿಯೋ, ಐಪಿವಿ ಮತ್ತು ರೋಟಾ ಲಸಿಕೆ ನೀಡಬೇಕು. ೨.೫ ತಿಂಗಳಿಗೆ ಎರಡನೇ ಡೋಸ್ ಮತ್ತು ೩.೫ ತಿಂಗಳಿಗೆ ಮೂರನೇ ಡೋಸ್ ನೀಡಬೇಕು. ೯ರಿಂದ ೧೨ನೇ ತಿಂಗಳೊಳಗಾಗಿ ಮೀಜಲ್ಸ್ ಲಸಿಕೆ, ೧.೫ ವರ್ಷಕ್ಕೆ ಡಿಪಿಟಿ ಬೂಷ್ಟರ್ ಮತ್ತು ಮೀಜಲ್ಸ್ ಎರಡನೇ ಡೋಸ್ ಲಸಿಕೆ, ೫ ವರ್ಷಕ್ಕೆ ಡಿಪಿಟಿ, ೧೦ ವರ್ಷಕ್ಕೆ ಟಿಡಿ, ೧೬ ವರ್ಷಕ್ಕೆ ಟಿಡಿ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ಮಗುವಿಗೆ ಯಾವುದೇ ಕಾಯಿಲೆಗಳನ್ನು ಬರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪ್ಪಾ ಎಸ್. ಬಿರಾದಾರ, ಪ್ರಮುಖರಾದ ಆದಿತ್ಯ, ರವಿ, ವಿಶಾಲ್ ಹಾಗೂ ಬಡಾವಣೆ, ಸುತ್ತ-ಮುತ್ತಲಿನ ಅನೇಕ ರೋಗಿಗಳು, ನಾಗರಿಕರು ಭಾಗವಹಿಸಿದ್ದರು.