ಶಾಲೆಯ ಜಾಗ ಒತ್ತುವರಿ ತೊರವುಗೊಳಿಸಿ

MLA
ಸುಟ್ಟಕೋಡಿಹಳ್ಳಿಯ ಸರ್ಕಾರಿ ಹಿ.ಪ್ರಾ.ಶಾಲೆ ಜಾಗ ಒತ್ತುವರಿಯಾಗಿದ್ದು ತೆರವುಗೊಳಿಸಿಕೊಡಬೇಕೆಂದು ಗ್ರಾಮಸ್ಥರು ಶಾಸಕ ನೇಮಿರಾಜ್ ನಾಯ್ಕಗೆ ಮನವಿ ಸಲ್ಲಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣಜಿ ಶಾಂತಕುಮಾರ, ವಕೀಲರಾದ ಸೋಮಶೇಖರ ಇತರರಿದ್ದರು.
Published on

ಕೊಟ್ಟೂರು: ಸಮೀಪದ ಸುಟ್ಟಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸಿಕೊಡಬೇಕು ಎಂದು ಗ್ರಾಮಸ್ಥರು ಶಾಸಕ ನೇಮಿರಾಜ್ ನಾಯ್ಕಗೆ ಸೋಮವಾರ ಮನವಿ ಮಾಡಿದರು.

ಸುಟ್ಟಕೋಡಿಹಳ್ಳಿಯಲ್ಲಿ ಸರ್ಕಾರಿ ವಸತಿ ನಿಲಯ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣಜಿ ಶಾಂತಕುಮಾರ್ ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿ ಶಾಲೆಯ ದಾಖಲಾತಿ ಅನ್ವಯ 21 ಅಡಿ ಜಾಗ ಒತ್ತುವರಿಯಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಂದ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಕ್ರಮ ಜರುಗಿಸಿಲ್ಲ

ಜಾಗ ಒತ್ತುವರಿ ತೆರವುಗೊಳಿಸಬೇಕು ಎಂದು ಶಾಲೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ದಾಖಲಾತಿ ಅನ್ವಯ ತಾಪಂ ಎಡಿ ವಿಜಯಕುಮಾರ ಶಾಲಾ ದಾಖಲಾತಿ ಪ್ರಕಾರ 21 ಅಡಿ ಜಾಗ ಒತ್ತುವರಿಯಾಗಿದ್ದನ್ನು ಅಳತೆಮಾಡಿ ದೃಢಪಡಿಸಿದರು. ಇದನ್ನು ತೆರವುಗೊಳಿಸಿ ಶಾಲೆಗೆ ಸೇರಿಸಿ ಎಂದು ರಾಂಪುರ ಪಿಡಿಒ ಹಾಗೂ ತಾಪಂ ಇಒ ಪರಮೇಶ್ವರಪ್ಪ ಅವರಿಗೆ ಅರ್ಜಿಕೊಟ್ಟಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ.

ಶಾಲೆ ಜಾಗವನ್ನು ಅಕ್ರಮಿಸಿದ ಖಾಸಗಿ ವ್ಯಕ್ತಿಗಳಿಗೆ ಡೋರ್ ನಂಬರ್ ಕೊಡುವ ಮೂಲಕ ಗ್ರಾಪಂ ಆಡಳಿತ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಈ ಕೂಡಲೇ ಅತಿಕ್ರಮಿತ ಜಾಗ ತೆರವುಗೊಳಿಸಿ ಶಾಲೆ ಸೇರ್ಪಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಗ್ರಾಮದ ವಕೀಲರಾದ ಸೋಮಶೇಖರ, ಅಜ್ಜಪ್ಪ, ಗೋಣಿಬಸಪ್ಪ, ಕೋಟ್ಯಪ್ಪ ಇನ್ನಿತರರಿದ್ದರು.

ಸರ್ಕಾರಿ ಶಾಲೆ ಜಾಗ ಒತ್ತವರಿಯಾಗಿರುವುದು ಸರಿಯಲ್ಲ. ಅತಿಕ್ರಮಣಮಾಡಿದರಿಂದ ಜಾಗವನ್ನು ತೆರವುಗೊಳಿಸಿ ಶಾಲೆಗೆ ಸೇರಿಸಲಾಗುವುದು. ಈ ಸಂಬಂಧ ತಾಪಂ ಇಒ, ಬಿ.ಇ.ಒಗೆ ಸೂಚಿಸಲಾಗುವುದು.


ನೇಮಿರಾಜ್ ನಾಯ್ಕ

ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net