

ಬೆಂಗಳೂರು: ತುಮಕೂರಿನ ಪ್ರತಿಷ್ಠಿತ ವೀಚಿ ಸಾಹಿತ್ಯ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಡಾ. ಬಿ. ಜನಾರ್ಧನ ಭಟ್ ಅವರ ‘ವಿನೂತನ ಕಥನ ಕಾರಣ’ (ವಿಮರ್ಶೆ) ಮತ್ತು ಡಾ. ರವಿಕುಮಾರ್ ನೀಹ ಅವರ ‘ಅರಸು ಕುರನ್ಗರಾಯ’ (ಸಂಶೋಧನೆ) ಕೃತಿಗಳು ಆಯ್ಕೆಯಾಗಿವೆ.
ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಒಂದು ಪ್ರಶಸ್ತಿಗೆ ಎರಡು ಕೃತಿಗಳು ಆಯ್ಕೆಯಾಗಿರುವುದರಿಂದ ಪ್ರಶಸ್ತಿ ಮೊತ್ತವನ್ನು ಇಬ್ಬರು ಲೇಖಕರಿಗೂ ಸಮನಾಗಿ ಹಂಚಲು ನಿರ್ಧರಿಸಲಾಗಿದೆ. ವೀಚಿ ಯುವ ಪ್ರಶಸ್ತಿಗೆ ದಯಾನಂದ ಅವರ ‘ಬುದ್ಧನ ಕಿವಿ’ (ಕತೆಗಳು) ಕೃತಿ ಆಯ್ಕೆಯಾಗಿದ್ದು, 5 ಸಾವಿರ ನಗದು ಮತ್ತು ಲಕ ಒಳಗೊಂಡಿದೆ ಎಂದು ವೀಚಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್. ನಾಗರಾಜ್ ತಿಳಿಸಿದ್ದಾರೆ.