ಬೋಯರ್‌ ನಾರಾಯಣ ರಾವ್‌ ಉತ್ತರ ಕನ್ನಡ ಹೊಸ ಡಿಸಿ

ಬೋಯರ್‌ ಹರ್ಷಲ್‌ ನಾರಾಯಣರಾವ್‌
ಬೋಯರ್‌ ಹರ್ಷಲ್‌ ನಾರಾಯಣರಾವ್‌
Published on: 

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಕಳೆದ ಎರಡು ಕಾಲು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕೆ.ಲಕ್ಷ್ಮೀಪ್ರಿಯಾ ಅವರು ವರ್ಗಾವಣೆಯಾಗಿದ್ದಾರೆ. ನೂತನ ಜಿಲ್ಲಾಧಿಕಾರಿಯಾಗಿ ಬೋಯರ್ ಹರ್ಷಲ್ ನಾರಾಯಣ ರಾವ್ ನೇಮಕಗೊಂಡಿದ್ದಾರೆ.

2024 ರ ಆಗಸ್ಟ್ನಲ್ಲಿ ಕೆ.ಲಕ್ಷ್ಮೀಪ್ರಿಯಾ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಶಿರೂರು ಗುಡ್ಡ ಕುಸಿತ, ಕಾಳಿ ಸೇತುವೆ ಕುಸಿತ, ಕಬ್ಬು ಬೆಳೆಗಾರರ ಪ್ರತಿಭಟನೆ ಹೀಗೆ ಹಲವು ಸವಾಲುಗಳನ್ನು ಎದುರಿಸಿದ್ದರು. ಈಗ ಅವರನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯ ವಿಶೇಷ ಆಯುಕ್ತರಾಗಿ ನೇಮಿಸಲಾಗಿದೆ.

ಮಹಾರಾಷ್ಟ್ರ ಮೂಲದ 2016 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ ರಾವ್ ಅವರು 40 ವರ್ಷ ವಯಸ್ಸಿನವರಾಗಿದ್ದು, ಪುಣೆ ವಿವಿಯಿಂದ ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಈ ಮೊದಲು ಯಾದಗಿರಿ ಜಿಲ್ಲಾಽಕಾರಿಯಾಗಿದ್ದರು. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಬೇರೆ ಹುದ್ದೆಗಳನ್ನು ನಿರ್ವಹಿಸಿದ್ದರು. ಪ್ರಸ್ತುತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇಲೆಕ್ಕ್ಟ್ರಾನಿಕ್‌ ಡಿಲೆವರಿ ಆಫ್ ಸಿಟಿಜನ್ ಸರ್ವೀಸ್(ಇಡಿಸಿಎಸ್) ನಿರ್ದೇಶಕರಾಗಿದ್ದರು.