ಪವಿತ್ರ ಸ್ನಾನಕ್ಕೆ ತೆರಳಿದ್ದ ಯುವಕ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ: ಪವಿತ್ರ ಸ್ನಾನಕ್ಕೆ ತೆರಳಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಾಜಾಳಿಯಲ್ಲಿ ನಡೆಯಿತು. ಮಾಜಾಳಿಯ ಯಶ್ ಶ್ಯಾಮ ಮಹಾಲೆ(17) ಮೃತ ಯುವಕ. ಅಬ್ಬರದ ಅಲೆಗಳ ಪರಿಣಾಮ ಸಮುದ್ರದಲ್ಲಿ ಮುಳುಗಿದ ವ್ಯಕ್ತಿಯನ್ನು ಹುಡುಕಿ ಆತನನ್ನು ಪೊಲೀಸರ ಸಹಕಾರದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗೆ ಆತ ಕೊನೆಯುಸಿರೆಳೆದಿದ್ದ. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಘ ಸ್ನಾನ :

ಮಾಘ ಅಮಾವಾಸ್ಯೆಯ ಅಂಗವಾಗಿ ಮಾಜಾಳಿಯಲ್ಲಿ ಸಾವಿರಾರು ಜನ ಮಂಗಳವಾರ ಸಮುದ್ರ ಸ್ನಾನ ಮಾಡಿದರು. ಶಿವರಾತ್ರಿಯ ಮರುದಿನದ ಈ ಅಮಾವಾಸ್ಯೆಯಂದು ಮಾಡುವ ಸ್ನಾನದಿಂದ ಪಾಪಗಳೆಲ್ಲ ದೂರವಾಗುವವು ಎಂಬುದು ನಂಬಿಕೆ.
ಮಾಜಾಳಿ ರಾಮನಾಥ ದೇವಸ್ಥಾನ ಹಾಗೂ ಅದರ ಪರಿವಾರ ದೇವರ 7 ಪಲ್ಲಕ್ಕಿಗಳನ್ನು ಛತ್ರ, ಚಾಮರ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ಸಮುದ್ರ ಸ್ನಾನ ಮಾಡಿಸಲಾಯಿತು. ನಂತರ ಭಕ್ತರು ಆಗಮಿಸಿ ದೇವರಿಗೆ ಹಣ್ಣು, ಕಾಯಿ ಪೂಜೆ ಅರ್ಪಿಸಿದರು. ಇನ್ನೊಂದೆಡೆ ಸಮುದ್ರ ಸ್ನಾನ ಮಾಡಿ ಬಂದ ಭಕ್ತರು ಪಿತೃ ತೃಪ್ತಿಗಾಗಿ ಪಡಿ, ಪಿಂಡ ಪ್ರಧಾನ ಮಾಡಿದರು. ಸಾವಿರಾರು ಜನ ಸೇರಿದ್ದರು. ತೀರದಲ್ಲಿ ಮರಳಿನ ಶಿವ ಲಿಂಗಗಳನ್ನು ಮಾಡಿ ಪೂಜೆ ಸಲ್ಲಿಸಲಾಯಿತು. ಒಟ್ಟಾರಿ ಮಾಜಾಳಿ ಜಾತ್ರೆಯಲ್ಲಿ ದೊಡ್ಡ ಜಾತ್ರೆಯ ಸನ್ನಿವೇಶ ನಿರ್ಮಾಣವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net