Yoga ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಅವಶ್ಯ

ಭಟ್ಕಳದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರದಲ್ಲಿ ಹಿರಿಯ ಯೋಗ yoga ಪಟುಗಳಾದ ವಿಟ್ಟಲ್ ಬಾಳೆರಿ ಅವರನ್ನು ಸನ್ಮಾನಿಸಲಾಯಿತು.
ಭಟ್ಕಳದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರದಲ್ಲಿ ಹಿರಿಯ ಯೋಗ yoga ಪಟುಗಳಾದ ವಿಟ್ಟಲ್ ಬಾಳೆರಿ ಅವರನ್ನು ಸನ್ಮಾನಿಸಲಾಯಿತು.
Published on
ಭಟ್ಕಳ: ಪಟ್ಟಣದ ಯೋಗ yoga ಗುರು ಗೋವಿಂದ ದೇವಡಿಗ ಅವರ ನಾಯಕತ್ವದಲ್ಲಿ ಮಣಕುಳಿಯ ಶ್ರೀ ನಾಗಮಾಸ್ತಿ ಕ್ಷೇತ್ರದಲ್ಲಿ ಅಡ್ವಾನ್ಸ್ ಯೋಗ ಶಿಕ್ಷಕರ 23 ದಿನಗಳ ತರಬೇತಿ ಶಿಬಿರಕ್ಕೆ ಪತಂಜಲಿ ಕಿಸಾನ್ ಸಂಘಟನೆಯ ರಾಜ್ಯ ಪ್ರಭಾರಿ ಸಂಜಯ್ ಗುತ್ತೇದಾರ  ಚಾಲನೆ ನೀಡಿದರು.
ಡಿವೈಎಸ್ಪಿ ಎಂ ಗಿರೀಶ್ ಅವರು ಮಾತನಾಡಿ, ಯೋಗದಿಂದ ರೋಗ ಮುಕ್ತಿ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಪ್ರತಿ ವ್ಯಕ್ತಿಗಳಿಗೂ ಅತ್ಯಗತ್ಯ. 
ಚಿಕ್ಕವರಿಂದ ವಯೋವೃದ್ಧರಿಗೆ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ ಸ್ವಸ್ಥ ಹಾಗೂ ಸ್ವಚ್ಛ ಜೀವನವನ್ನು ನಡೆಸಲಿಕ್ಕೆ ಸಾಧ್ಯ. ಯೋಗದಲ್ಲಿ ಇಂದು ಜಗತ್ತಿನ ವಿವಿಧ ದೇಶಗಳಿಗೆ ಭಾರತವೇ ಮಾದರಿಯಾಗಿದೆ ಎಂದರು.
ಭಟ್ಕಳ ಎಜುಕೇಷನ್ ಟ್ರಸ್ಟಿ  ನಾಗೇಶ ಭಟ್ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ನಿರೋಗಿಗಳಾಗಬೇಕು ಎಂದರು.
 ಅಧ್ಯಕ್ಷತೆ ವಹಿಸಿದ್ದ ಶ್ರೀ ನಾಗ ಮಾಸ್ತಿ ಕ್ಷೇತ್ರದ ಅಧ್ಯಕ್ಷ ಸತೀಶ ಕುಮಾರ್ ಯೋಗ ಮಹತ್ವದ ಕುರಿತು ವಿವರಿಸಿದರು. 
ಭಟ್ಕಳದಲ್ಲಿ ಯೋಗ ತರಬೇತಿಗಾಗಿ ಕೆಲವು ದಶಕಗಳ ಕಾಲ ಶ್ರಮಿಸಿದ ಹಿರಿಯ ಯೋಗ ಪಟುಗಳಾದ ವಿಟ್ಟಲ್ ಬಾಳೆರಿ ಅವರನ್ನು ಸನ್ಮಾನಿಸಲಾಯಿತು. 
ಗೋವಿಂದ ಗುರೂಜಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶ್ರೀನಾಥ ಗೌಡ, ಪತಂಜಲಿ ಜಿಲ್ಲಾ ಪ್ರಭಾವಿ ರಘುರಾಮ ಹೆಗಡೆ, ರಾಜ್ಯ ಪತಂಜಲಿ ಸದಸ್ಯರಾದ ನಾಗೇಂದ್ರ ಭಟ್ ಇತರರು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net