ಕಾರಿನ ಚಾಲಕ ಶಿವಾನಂದ ಸುಬ್ರಾಯ ಅಂಬಿಗ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗೇಶ ಗುಣವಂತ ಅಂಬಿಗ, ಸುಮಿತ್ರಾ ಶಿವಾನಂದ ಅಂಬಿಗ ಹಾಗೂ ಸುಶಾಂತ ಶಿವಾನಂದ ಅಂಬಿಗ ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಟಿಪ್ಪರ್ ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಜಲ್ಲಿ, ಸಿಮೆಂಟ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.