God ನಿತ್ಯ ದೇವರ ಪೂಜೆ, ಸಂಧ್ಯಾವಂದನೆ ಮಾಡಿ

ಸಿದ್ದಾಪುರದ ಲಕ್ಷ್ಮೀನಾರಾಯಣ (god) ದೇವಾಲಯದಲ್ಲಿ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
ಸಿದ್ದಾಪುರದ ಲಕ್ಷ್ಮೀನಾರಾಯಣ (god) ದೇವಾಲಯದಲ್ಲಿ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
Published on
ಸಿದ್ದಾಪುರ: ನಿತ್ಯ ದೇವರ God ಪೂಜೆ , ಸಂಧ್ಯಾವಂದನೆ ಹಾಗೂ ಆಚಾರ ವಿಚಾರ ಸರಿಯಾಗಿ ಪಾಲನೆ ಮಾಡಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಶ್ರೀ ಕ್ಷೇತ್ರ ಕರ್ಕಿಯ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಆಯೋಜಿಸಲಾಗಿದ್ದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶ್ರೀಗಳ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದು ಹಾಗೂ ಭವ್ಯ ಮೆರವಣಿಗೆಯಲ್ಲಿ ಮಹಿಳೆಯರು ಯುವಕರು ಹಾಗೂ ಸಮಸ್ತ ಸಮಾಜದವರು ಸೇರಿರುವುದರಿಂದ ಮೆರವಣಿಗೆ ಶೋಭೆ ತಂದಿದೆ. ಇದು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಒಳ್ಳೆಯ ಕೆಲಸದಿಂದ ಮಾತ್ರ ಒಳ್ಳೆಯದಾಗಲು ಸಾಧ್ಯ. ನಮ್ಮ ಜೀವನ ಪರಿಪೂರ್ಣ ಆಗಲು ದೇವರ ನಾಮಸ್ಮರಣೆ ಮಾಡಿ ವಿಶ್ವಾಸದಿಂದ ಉತ್ತಮ ಕಾರ್ಯ ಮಾಡಬೇಕು. ಈ ರೀತಿಯಿಂದ ಜೀವನ ಸಾಗಿದರೆ ದೈವತ್ವ ಅರಿವಾಗುತ್ತದೆ ಎಂದರು.
ಸಿದ್ದಾಪುರ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತರಾಮ ವಿ. ಶೇಟ್ ದಂಪತಿ ಪಾದಪೂಜೆ ನೆರವೇರಿಸಿ ಫಲ ಸಮರ್ಪಿಸಿದರು.
ದೈವಜ್ಞ ಸರಾಪ ಸಂಘದ ಅಧ್ಯಕ್ಷ ದಿವಾಕರ್ ಕೆ .ರೇವಣಕರ್, ರಾಜರಾಜೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯ ರಾಮದಾಸ್ ರಾಯ್ಕರ್, ಲಕ್ಷ್ಮೀನಾರಾಯಣ ಸುವರ್ಣ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗುರುನಾಥ ಪಿ. ವೆರ್ಣೇಕರ , ದೈವಜ್ಞ ಯುವಕ ಸಂಘದ ಅಧ್ಯಕ್ಷ ದರ್ಶನ್ ಡಿ. ರೇವಣಕರ್ ಉಪಸ್ಥಿತರಿದ್ದರು.
ಕರ್ಕಿ ಮಠದ ವೇ. ಯೋಗೀಶ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಸುಮಿತ್ರಾ ಜಿ.ಶೇಟ್ ಸಂಗಡಿಗರು ಪ್ರಾರ್ಥನ ಗೀತೆ ಹಾಡಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ರಮೇಶ ಕೆ.ರಾಯ್ಕರ್ ಸ್ವಾಗತಿಸಿದರು. ಮಹೇಶ ವಿ.ಶೇಟ್ ನಿರ್ವಹಿಸಿದರು. ಚಂದ್ರಹಾಸ ಜಿ.ಶೇಟ್ ವಂದಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಯತಿಧ್ವಯರನ್ನು ಮಾತೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಸಿದ್ದಾಪುರದ ರಾಮಕೃಷ್ಣ ಹೆಗಡೆ ವೃತ್ತದಿಂದ ಮೆರವಣಿಗೆಯ ಮೂಲಕ ರಾಜಮಾರ್ಗ, ಅಶೋಕ ರಸ್ತೆಯ ಮುಖಾಂತರ ಪಂಚವಾದ್ಯ, ಚಂಡೆವಾದ್ಯ, ಭಜನಾತಂಡಗಳೊಂದಿಗೆ ಶ್ರೀಗಳನ್ನು ಶ್ರೀ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಕರೆದೊಯ್ಯಲಾಯಿತು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net