ಕರ್ನಾಟಕ-ಸ್ಟ್ರೆಂತನಿಂಗ್ ರಿಸಿಲಿಯನ್ಸ್ ಆ್ಯಂಡ್ ದ ಇಕಾನಮಿ ಎಂಬ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಒಟ್ಟು ಯೋಜನೆಯಲ್ಲಿ 252 ಕೋಟಿ ರೂ. ರಾಜ್ಯ ಸರ್ಕಾರ ಭರಿಸಿದರೆ ಉಳಿದ ಶೇ.70 ರಷ್ಟು ಮೊತ್ತವನ್ನು ವಿಶ್ವ ಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದೆ. ಇದರಲ್ಲಿ ಮುಂದಿನ ಐದು ವರ್ಷಕ್ಕೆ ಸಂಬAಽಸಿ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಮುದ್ರ ಕೊರೆತ , ಸಮುದ್ರ ಮಾಲಿನ್ಯ ತಡೆ, ಕರಾವಳಿ ಆಧಾರಿತ ಪರಿಸರ ಪ್ರವಾಸೋದ್ಯಮ, ಮೀನುಗಾರಿಕೆ ಅಭಿವೃದ್ಧಿ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಅಲ್ಲದೇ, ಕಾಂಡ್ಲಾ ಬೆಳೆಸುವುದು, ಡಾಲಿನ್ ಹಾಗೂ ಕಡಲಾಮೆಗಳ ರಕ್ಷಣೆಯೂ ಇದರಲ್ಲೇ ಸೇರಿದೆ. ಉತ್ತರ ಕನ್ನಡ ಜಿಲ್ಲೆಗೆ ಸುಮಾರು 250 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.