ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಗಳಿಗೆ ಹಾಗೂ ಉತ್ತಮ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಡಿವೈಎಸ್ಪಿ ಗಿರೀಶ್‌ಎಸ್.ವಿ., ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ, ಎನ್‌ಡಬ್ಲುಕೆಆರ್‌ಟಿಸಿ ಘಟಕ ವ್ಯವಸ್ಥಾಪಕಿ ಸೌಮ್ಯ ನಾಯಕ, ಕ್ರಿಮ್ಸ್ ಡೀನ್ ನಿರ್ದೇಶಕಿ ಡಾ. ಪೂರ್ಣಿಮಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಜಿಲ್ಲಾ ಜಾರಿ ಅಧಿಕಾರಿ ಡಾ. ಆಶ್ವಿನಿ ಬೋರ್ಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ಲತಾ ನಾಯಕ, ಜಿಲ್ಲಾ ಸರ್ವೇಕ್ಷಣಾಽಕಾರಿ ಆರ್ಚನ ನಾಯಕ, ಸೆನ್ ಠಾಣೆಯ ಡಿವೈಎಸ್‌ಪಿ ಶ್ವಿನಿ ಕುಮಾರ ಬಿ. ಜಿಲ್ಲಾ ಮಕ್ಕಳ ರಕ್ಷಣಾಽಕಾರಿ ನಾಗರತ್ನ ನಾಯಕ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ, ಹೆಸ್ಕಾಂ ಇಂಜಿನಿಯರ್ ರೋಶನಿ, ಸ್ಥಳೀಯ ದೂರು ಸಮಿತಿಯ ಅಧ್ಯಕ್ಷೆ ಹೇಮಲತಾ ತಾಂಡೇಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಽಕಾರಿ ಶುಭ ನಾಯಕ, ಸರ್ಕಾರಿ ಅಭಿಯೋಜಕಿ ತನುಜಾ ಬಿ. ಹೊಸಪಟ್ಟಣ, ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿರುಪಾಕ್ಷ ಗೌಡ ಪಾಟೀಲ ಇದ್ದರು.