River alignment ಯಾರಿಗೂ ತೊಂದರೆಯಾಗದಂತೆ ನದಿ ಜೋಡಣೆಯಾಗಲಿ

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Published on
ಶಿರಸಿ: ಯಾರಿಗೂ ತೊಂದರೆ ಆಗದ ರೀತಿಯಲ್ಲಿ ನದಿ ಜೋಡಣೆ River alignment ಮಾಡಿ ನಮಗೆ ಕುಡಿಯುವ ನೀರು ಒದಗಿಸಿ ಎಂಬುದು ನಮ್ಮ ಆಗ್ರಹ. 
ನದಿ ನೀರು ಬಿಟ್ಟುಕೊಡಲು ಇಲ್ಲಿಯ ಜನತೆ ವಿರೋಧ ಮಾಡುವುದು ಸಹಜ. ನಮಗೂ ನೀರಿನ ಅಗತ್ಯವಿರುವ ಹಿನ್ನೆಲೆಯಲ್ಲಿ ಹೋರಾಡುತ್ತಿದ್ದೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಗೋಳಿಯ ಖಾಸಗಿ ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ನದಿ ಎಲ್ಲಾದರೂ ಒಂದು ಕಡೆ ಸಮುದ್ರ ಸೇರುತ್ತದೆ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ 2 ಸಾವಿರ ಕಿ.ಮೀ. ಹರಿಯುತ್ತದೆ. 25 ಲಕ್ಷ ಹೆಕ್ಟೇರ್ ಪ್ರದೇಶಕ್ಕೂ ನೀರು ನೀಡುತ್ತದೆ. 
ಅದೇ ರೀತಿ ನದಿ ಜೋಡಣೆಯಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಇಲ್ಲಿಯ ಪರಿಸರಕ್ಕೆ ಏನೂ ತೊಂದರೆ ಆಗಬಾರದು ಎಂಬುದು ಮೊದಲಿನಿಂದಲೂ ನನ್ನ ಆಗ್ರಹ. ಈ ಯೋಜನೆ ನಾವು ಹಾಕಿಕೊಂಡದ್ದೂ ಅಲ್ಲ, 
35 ವರ್ಷಗಳ ಹಿಂದೆಯೇ ರೂಪುಗೊಂಡಿದೆ. 94-95ರಲ್ಲೇ ಸರ್ವೇ ಆಗಿದೆ. ದಕ್ಷಿಣ ಭಾರತದ ನದಿ ಜೋಡಣೆ ಯೋಜನೆಗಳಲ್ಲಿ ಇದೂ ಒಂದು. ಮುಳುಗಡೆ ಆಗದಂತೆ ಯೋಜನೆ ರೂಪಿಸಿದ್ದಾರೆ ಎಂದರು.
ಮೆಕ್ಕೆಜೋಳ ಖರೀದಿಗೆ ನಾವು ಸೂಚನೆ ನೀಡಿದ್ದೇವೆ ಎನ್ನುತ್ತಾರೆ. ಇನ್ನೊಂದೆಡೆ ಮೆಕ್ಕೆಜೋಳ ಖರೀದಿ ಪ್ರಮಾಣವನ್ನು 20 ಕ್ವಿಂಟಾಲ್‌ಗೆ ನಿಗದಿಪಡಿಸಿದೆ. ಇಂದು ಸಣ್ಣ ಹಿಡುವಳಿದಾರ ಸಹ 100 ಕ್ವಿಂಟಾಲ್‌ಗಿಂತ ಜಾಸ್ತಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಇದರ ಪ್ರಮಾಣ ಹೆಚ್ಚಿಸಬೇಕು ಎಂದರು.
ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇಲ್ಲವೇನೋ ಅನಿಸುತ್ತಿದೆ. ಹೀಗಾಗಿ, ರಾಜ್ಯದ ನಾಯಕರು ಎರಡು ಗುಂಪುಗಳಲ್ಲಿ ಬಡಿದಾಡುತ್ತಿದ್ದಾರೆ. ಸರಿಯಾಗಿ ಆಡಳಿತ ಮಾಡಿದರೆ ಮಾಡಲಿ, ಇಲ್ಲದಿದ್ದರೆ ತೊಲಗಲಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net