ಸಿದ್ದಾಪುರ&ಶಿರಸಿ ರಾಜ್ಯ ಹೆದ್ದಾರಿಯ ಹದಿನಾರನೇ ಮೈಲಕಲ್ ಸಮೀಪದ ತುಂಬರಕೋಡ ಜಲಪಾತವೂ ಪ್ರವಾಸಿಗರನ್ನು ತನ್ನತ್ತ ಆಕಷಿರ್ಸುತ್ತಿದೆ. ವಿಶೇಷವಾಗಿ ಈ ಜಲಪಾತ ಮಕ್ಕಳಿಗೆ ಹೆಚ್ಚು ಖುಷಿ ನೀಡುವಂಥದ್ದಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಹಾಗೂ ನಿಪ್ಲಿ ಫಾಲ್ಸ್ಗೆ ಹೋಗುವ ಪ್ರವಾಸಿಗರಿಗೆ ಇದೊಂದು ಟಿಪ್ಸ್ ಎನ್ನುವಂತಿದೆ. ಜಲಪಾತದ ಹತ್ತಿರದವರೆಗೂ ತೆರಳಿ ಸಂಭ್ರಮಿಸಬಹುದಾಗಿದೆ. ಆದರೆ, ಇಲ್ಲಿ ಮಳೆ ಬಿದ್ದರೆ ಮಾತ್ರ ಇದರ ಸೌಂದರ್ಯ ಸವಿಯಬಹುದು. ಇನ್ನು ಬುರುಡೆ ಫಾಲ್ಸ್ ಹಾಗೂ ಶೀರ್ಲಗುಂಡಿ ಫಾಲ್ಸ್ಗಳು ಸಹ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ.