ಕಾರವಾರ: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕಾರವಾರ ಬಂದರಿನ ಮೇಲೂ ಬೀಳುವ ಆತಂಕವಿದೆ. ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಡಾಂಬರು ಎಂದರೆ ಬಿಟುಮಿನ್ ವಹಿವಾಟು ಹೆಚ್ಚಾಗಿ ನಡೆಯುತ್ತಿತ್ತು. ಇಲ್ಲಿ ಬಿಟುಮಿನ್ ಟ್ಯಾಂಕರ್‌ಗಳಿದ್ದು, ಇಲ್ಲಿಂದ ಅರ್ಧ ಕರ್ನಾಟಕ್ಕೆ ಡಾಂಬರು ಪೂರೈಕೆಯಾಗುತ್ತಿದೆ. ಇದರಿಂದ ಬಂದರಿಗೆ 10 ರಿಂದ 12 ಕೋಟಿ ರೂ. ನೇರ ಆದಾಯ ಬಂದರೆ, ಕಸ್ಟಮ್ಸ್, ಜಿಎಸ್‌ಟಿ ಸೇರಿ ನೂರು ಕೋಟಿಗೂ ಅಧಿಕ ಆದಾಯ ಬರುತ್ತದೆ. ಜೊತೆಗೆ ಉದ್ಯೋಗಗಳೂ ಸೃಷ್ಟಿಯಾಗಿವೆ.