ಕಾರವಾರಕ್ಕೆ ಬಂದ ವಿಂಟೇಜ್‌ ಬೆಂಟ್ಲಿ ಕಾರು

ಕಾರವಾರದಲ್ಲಿ ಕಾಣಿಸಿಕೊಂಡ ವಿಂಟೇಜ್‌ ಬೆಂಟ್ಲಿ ಕಾರುಗಳು
ಕಾರವಾರದಲ್ಲಿ ಕಾಣಿಸಿಕೊಂಡ ವಿಂಟೇಜ್‌ ಬೆಂಟ್ಲಿ ಕಾರುಗಳು
Published on
ಕಾರವಾರ: ಐತಿಹಾಸಿಕ ಪ್ರಸಿದ್ಧ ವಿಂಟೇಜ್ ಬೆಂಟ್ಲಿ ಕಾರುಗಳು ಮಂಗಳವಾರ ಕಾರವಾರ ಬೀದಿಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದವು.
ಬೆಂಟ್ಲಿ 1920-30 ರ ದಶಕದ ಅತ್ಯಂತ ಘಟ್ಟಿ ಇಂಜಿನ್ ಹೊಂದಿರುವ ಕಾರುಗಳಾಗಿವೆ. ನಾಲ್ವರು ಬ್ರಿಟಿಷ್ ಪ್ರಜೆಗಳು ಈ ಎರಡು ಕಾರುಗಳ ಮೂಲಕ ಭಾಗಶಃ ರಸ್ತೆ ಮೂಲಕ ಶ್ರೀಲಂಕಾ ಪ್ರವಾಸ ಹೊರಟಿದ್ದು, ಭಾರತ ತಲುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ನಡೆಸಿದ್ದಾರೆ.
ಗೋವಾದಿಂದ ಕಾರವಾರಕ್ಕೆ ಆಗಮಿಸಿದ ಅವರು ಮಂಗಳವಾರ ಕಾರವಾರದಲ್ಲಿ ಬೆಳಗಿನ ತಿಂಡಿಗಾಗಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರು ನೋಡಲು, ಸೆಲಿ ತೆಗೆದುಕೊಳ್ಳಲು ಜನ ಮುಗಿಬಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net