ವಿದ್ಯಾದಾಯಿನಿ ದೇಗುಲವಾದ ಸರ್ಕಾರಿ ಕಾಲೇಜು

ಗೋಕರ್ಣ ಬಳಿಯ ಹಿರೇಗುತ್ತಿ ಸರ್ಕಾರಿ ಕಾಲೇಜ್ ವಾರ್ಷಿಕೋತ್ಸವವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಪ್ರಾಚಾರ್ಯ ಸತೀಶ ನಾಯ್ಕ, ರಾಜೇಂದ್ರ ಭಟ್ಟ, ರಾಮು ಕೆಂಚನ್, ಉದ್ದಂಡ ಗಾಂವಕರ, ಪ್ರಾಚಾರ್ಯ ರಾಜೀವ ನಾಯ್ಕ ಕೋನಳ್ಳಿ ಮತ್ತಿತರರಿದ್ದರು.
ಗೋಕರ್ಣ ಬಳಿಯ ಹಿರೇಗುತ್ತಿ ಸರ್ಕಾರಿ ಕಾಲೇಜ್ ವಾರ್ಷಿಕೋತ್ಸವವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಪ್ರಾಚಾರ್ಯ ಸತೀಶ ನಾಯ್ಕ, ರಾಜೇಂದ್ರ ಭಟ್ಟ, ರಾಮು ಕೆಂಚನ್, ಉದ್ದಂಡ ಗಾಂವಕರ, ಪ್ರಾಚಾರ್ಯ ರಾಜೀವ ನಾಯ್ಕ ಕೋನಳ್ಳಿ ಮತ್ತಿತರರಿದ್ದರು.
Published on
ಗೋಕರ್ಣ: ಶುಲ್ಕ ರಹಿತವಾಗಿ ಶಿಕ್ಷಣ ಒದಗಿಸುವ ಸರ್ಕಾರಿ ಕಾಲೇಜುಗಳು ಬಡವರ ಪಾಲಿನ ವಿದ್ಯಾದಾಯಿನಿ ದೇಗುಲಗಳಾಗಿವೆ. ಇಂತಹ ದೇಗುಲಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಮೊದಲ ಆದ್ಯತೆ ನೀಡುವ ಮೂಲಕ ಆರ್ಥಿಕ ದುರ್ಬಲರ ಮನೆಗಳಲ್ಲಿ ವಿದ್ಯಾಜ್ಯೋತಿ ಬೆಳಗುವ ಮಹತ್ಕಾರ್ಯಕ್ಕೆ ಪ್ರೇರಣೆಯಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹತ್ತಿರದ ಹಿರೇಗುತ್ತಿ ಸರ್ಕಾರಿ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರೇಗುತ್ತಿಯ ಸರ್ಕಾರಿ ಕಾಲೇಜ್ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಮತ್ತು ಉತ್ತಮ ಶಿಕ್ಷಣ ನೀಡುವ ಮೂಲಕ ತಾಲೂಕಿನಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ. ಸುಸಜ್ಜಿತವಾಗಿರುವ ಈ ಕಾಲೇಜಿಗೆ ಅಗತ್ಯವಿರುವ ಪ್ರಮುಖ ಮೂಲ ಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಹೆಚ್ಚುವರಿ ಶೌಚಾಲಯಗಳ ಅಗತ್ಯವಿರುವುದರಿಂದ 15 ಲಕ್ಷ ರೂ. ವಿಶೇಷ ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ಹೀಗೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜಿನ ಪ್ರಯೋಜನವನ್ನು ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದರು.
ಪಪೂ ವಿಭಾಗದ ಪ್ರಭಾರ ಉಪನಿರ್ದೇಶಕ, ಪ್ರಾಚಾರ್ಯ ಸತೀಶ ನಾಯ್ಕ, ತಾಲೂಕು ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ನಿವೃತ್ತ ಶಿಕ್ಷಕ ಉದ್ದಂಡ ಗಾಂವಕರ, ಶ್ರೀ ಮಹಾಬಲೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಮು ಕೆಂಚನ್‌ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳಿಂದ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ ಉಪನ್ಯಾಸಕಿ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ರಾಜೀವ ನಾಯ್ಕ ಕೋನಳ್ಳಿ ವಹಿಸಿದ್ದರು. ವಾರ್ಷಿಕೋತ್ಸವ ನಿಮಿತ್ತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು. ಉಪನ್ಯಾಸಕರಾದ ರಮೇಶ ಗೌಡ, ನಾಗರಾಜ ಗಾಂವಕರ, ನೇತ್ರಾವತಿ ನಾಯಕ ಮತ್ತಿತರರು ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net