ತರಕಾರಿ ಮಾರುಕಟ್ಟೆ ಕಾಮಗಾರಿಗೆ ಶಂಕುಸ್ಥಾಪನೆ

ಕಾರವಾರ ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ನೆರವೆರಿತು.
ಕಾರವಾರ ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ನೆರವೆರಿತು.
Published on
ಕಾರವಾರ: ನಗರದ ಮೀನು ಮಾರುಕಟ್ಟೆಯ ಪಕ್ಕ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಅಂತೂ ಚಾಲನೆ ಸಿಕ್ಕಿದೆ. ಹಿಂದೆ ಇದ್ದ ಮಾರುಕಟ್ಟೆಯನ್ನು ವರ್ಷಗಳ ಹಿಂದೆ ಕೆಡವಲಾಗಿತ್ತು. ಆದರೆ, ಹೊಸ ಕಾಮಗಾರಿಗೆ ಚಾಲನೆ ನೀಡಿರಲಿಲ್ಲ. ಇದರಿಂದ ತರಕಾರಿ ವ್ಯಾಪಾರಸ್ಥರು ತಮಗೆ ಸೂರು ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. 
ಸೋಮವಾರ ಶಾಸಕ ಸತೀಶ ಸೈಲ್ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 
ಕಾರವಾರ ನಗರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಆದರೆ, ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಮಧ್ಯ ಬರಬಾರದು ಎಂದರು. ತರಕಾರಿ, ಹೂವು, ಹಣ್ಣು ಮಾರಾಟಗಾರರ ಸಮಸ್ಯೆ ಬಗೆಹರಿಸಲು ಬದ್ಧ ಎಂದರು. 
ಜಾಗದ ನಡುವೆ ಖಾಸಗಿ ವ್ಯಕ್ತಿಗಳ ಮಾಲ್ಕಿ ಜಾಗ ಒಂದಿದೆ. ಅವರಿಗೆ ಮನವಿ ಮಾಡಿದ್ದು, ಅವರು ಜಾಗವನ್ನು ನಿರ್ಮಾಣಕ್ಕಾಗಿ ಬಿಟ್ಟುಕೊಡಲು ಸಿದ್ಧರಿದ್ದಾರೆ. ಆ ಜಾಗದಷ್ಟು ದೊಡ್ಡ ಪ್ರದೇಶವನ್ನು ನಾವು ಕಟ್ಟಿ ಅವರಿಗೆ ಬಿಟ್ಟುಕೊಡಲಿದ್ದೇವೆ ಎಂದರು. 

5 ಕೋಟಿ ರೂ.ಕಾಮಗಾರಿ: 

ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಮಾತನಾಡಿ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-4 ನೇ ಅನುದಾನದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ಕಾಮಗಾರಿ ನಡೆಯಲಿದ್ದು, ನೆಲ ಮಹಡಿಯಲ್ಲಿ ಒಟ್ಟು 27 ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು. ನೆಲ ಮಹಡಿ ಹಾಗೂ ಎರಡು ಅಂತಸ್ಸಿನ ಕಟ್ಟಡದಲ್ಲಿ ಒಟ್ಟು 45 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷರಾದ ರವಿರಾಜ ಅಂಕೋಲೇಕರ್,ಗಣಪತಿ ನಾಯ್ಕ, ಕೆಡಿಎ ಮಾಜಿ ಅಧ್ಯಕ್ಷ ಸಂದೀಪ ತಳೇಕರ್, ಬಾಬು ಶೇಖ್, ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಅಜೀಜ್ ಇತರರು ಇದ್ದರು. ಲೆಕ್ಕಾಧಿಕಾರಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. 
............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net