ಜಿಲ್ಲೆಯ 1 ಲಕ್ಷಕ್ಕೂ ಅಧಿಕ ಮತದಾರರು ಪಟ್ಟಿಯಿಂದ ಹೊರಕ್ಕೆ ..?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಮುಕ್ತಾಯ ಹಂತಕ್ಕೆ
  • ಕಾರವಾರದಲ್ಲಿ ಅತಿ ಹೆಚ್ಚು ಮತದಾರರು ಹೊರಕ್ಕೆ

ಕಾರವಾರ:

ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ನಡೆದಿದ್ದು, ಜುಲೈ 31 ರವರೆಗೆ ಎಂದರೆ 1 ತಿಂಗಳಲ್ಲಿ ಶೇ. 91.10 ರಷ್ಟು ಮತದಾರರ ದಾಖಲೆಗಳನ್ನು ಎನ್ಯುಮರೇಶನ್ ಫಾರ್ಮ್ಗಳ ಮೂಲಕ ಸಂಗ್ರಹಿಸಿ ಗಣಕೀಕರಣಗೊಳಿಸಲಾಗಿದೆ.

ಮತದಾರರ ಪಟ್ಟಿಯಲ್ಲಿ ಸೇರಲು ಅರ್ಹರಲ್ಲ ಎಂಬAಥ 1,02,333 ಮತದಾರರನ್ನು ಗುರುತಿಸಲಾಗಿದೆ. ಅದರಲ್ಲಿ 42,333 ಮತದಾರರು ಶಾಶ್ವತ ವಲಸೆ ಹೋಗಿದ್ದಾರೆ. 43,402 ಮತದಾರರು ಮೃತಪಟ್ಟಿದ್ದಾರೆ. 11,949 ಮತದಾರರ ಹೆಸರು ಎರಡು ಮೂರು ಕಡೆ ಎಂದರೆ ದ್ವಿಪ್ರತಿಯಲ್ಲಿತ್ತು ಎಂದು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 12,30,037 ಮತದಾರರು ಇದ್ದಾರೆ ಎಂದು ಪಟ್ಟಿಯನ್ನು ಆಧರಿಸಿ ಎನ್ಯುಮರೇಶನ್ ಫಾರ್ಮ್ಗಳನ್ನು ಶೇ.100 ರಷ್ಟು ವಿತರಿಸಲಾಗಿತ್ತು. ಅದರಲ್ಲಿ ಇದುವರೆಗೆ 11,20,615 ಫಾರ್ಮ್ಗಳನ್ನು ವಾಪಸ್ ಪಡೆದು ಗಣಕೀಕರಣಗೊಳಿಸಲಾಗಿದೆ. ಇನ್ನೂ ಸಾಕಷ್ಟು ಫಾಮ್‌ಳನ್ನು ಗಣಕೀಕರಣಗೊಳಿಸುವುದು ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.

ಕಾರವಾರದಲ್ಲಿ ಅತಿ ಹೆಚ್ಚು:

ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಇದುವರೆಗೆ 24,068 ಮತದಾರರು ಪಟ್ಟಿಗೆ ಸೇರಲು ಅರ್ಹರಲ್ಲ ಎಂದು ಗುರುತಿಸಲಾಗಿದೆ. ಭಟ್ಕಳ-18,734,ಹಳಿಯಾಳ-17,941, ಯಲ್ಲಾಪುರ-15,585, ಕುಮಟಾ-14,778, ಶಿರಸಿ-11,827 ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನೂ ಹಲವು ಫಾರ್ಮ್ಗಳನ್ನು ಸಂಗ್ರಹಿಸುವುದು ಹಾಗೂ ಗಣಕೀಕರಣ ಮಾಡುವುದು ಬಾಕಿ ಇದೆ. ನಂತರವಷ್ಟೇ ಅಂತಿಮ ಮತದಾರರ ಸಂಖ್ಯ ಸಿಗಲಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರವೂ ಮತದಾರರು ತಮ್ಮ ಹೆಸರು ಕೈಬಿಟ್ಟಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಾಗಿಲು ಹಾಕಿದ ಮನೆ

ಬಾಗಿಲು ಹಾಕಿದ ಮನೆಗಳ ಒಳಗೆ ಎನ್ಯುಮರೇಶನ್ ಫಾರ್ಮ್ಗಳನ್ನು ಎಸೆದ ಬಿಎಲ್‌ಒಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರದಲ್ಲಿ ಶೇ.100 ರಷ್ಟು ಸಾಧನೆ ಮಾಡಬೇಕು ಎಂಬ ಹರಿಬರಿಯಲ್ಲಿ ಬಾಗಿಲು ಹಾಕಿದ ಮನೆಗಳಿಗೂ ಫಾರ್ಮ್ ಎಸೆದು ಹೋಗಿದ್ದರು. ಆದರೆ, ಈಗ ಅವುಗಳನ್ನು ಸಂಗ್ರಹಿಸಬೇಕಾಗಿದ್ದು, ಈಗ ಮಾಲೀರ‍್ಯಾರು ಎಂದು ಹುಡುಕಲಾರಂಭಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಸಂಗ್ರಹವಾಗದ ಹಾಗೂ ಗೈರು ಮತದಾರರು ಎಂದು 4524 ಫಾರ್ಮ್ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಕಾರವಾರ ಕ್ಷೇತ್ರ ಒಂದರಲ್ಲೇ 1735 ಇಂಥ ಮತದಾರರಿದ್ದಾರೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರತಿ ಹಂತದಲ್ಲೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ನಡೆಸಿ, ವಿವರಗಳನ್ನು ನೀಡಲಾಗಿದೆ. ಎಲ್ಲ ಬೂತ್‌ಗಳಲ್ಲಿ ರಾಜಕೀಯ ಪಕ್ಷದ ಅಧಿಕೃತ ಪ್ರತಿನಿಧಿಗಳಾದ ಬಿಎಲ್‌ಎ 2 ಗಳೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಕ್ಷೇಪಣೆಗಳಿದ್ದರೆ ತಿಳಿಸಲು ಹೇಳಲಾಗಿದೆ.
ಕೆ.ಲಕ್ಷ್ಮೀಪ್ರಿಯಾ
ಜಿಲ್ಲಾಧಿಕಾರಿ, ಉತ್ತರ ಕನ್ನಡ
.......
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net