ಮಳೆ ಮಾಪನ ಕೇಂದ್ರಗಳನ್ನು ತುರ್ತಾಗಿ ದುರಸ್ತಿ ಮಾಡಿ

ಮಳೆ ಮಾಪನ ಕೇಂದ್ರಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮಳೆ ಮಾಪನ ಕೇಂದ್ರಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Published on
ಶಿರಸಿ: ಮಳೆ ಮಾಪನ ಕೇಂದ್ರಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು ಎಂದು ಆಗ್ರಹಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿದರು.
ಮಳೆ ಪಾಮಪನಗಳು ಕೆಟ್ಟು ನಿಂತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ರೈತರಿಗೆ ಸೃಷ್ಟಿಯಾಗಿದೆ. ವಿಮೆ ಪರಿಹಾರದಿಂದ ವಂಚಿತರಾಗಿರುವ ಅರ್ಹ ರೈತರಿಗೆ ತಕ್ಷಣ ನ್ಯಾಯಬದ್ಧ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ನೆರವಾಗಲು ಫಸಲ್ ಬಿಮಾ ಹಾಗೂ ಹವಾಮಾಧಾರಿತ ಬೆಳೆ ವಿಮೆ ಯೋಜನೆಯನ್ನು ಆರಂಭಿಸಲಾಗಿದೆ.
ಪ್ರತಿ ಗ್ರಾಪಂನಲ್ಲಿರುವ ಮಳೆ ಮಾಪನ ಕೇಂದ್ರಗಳು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮೇಲುಸ್ತುವಾರಿ ಮಾಡಬೇಕಿತ್ತು. ನಿಖರ ದಾಖಲೆಗಳನ್ನು ನೀಡಬೇಕಿತ್ತು ಆದರೆ, ಮಳೆ ಮಾಪನ ಕೇಂದ್ರಗಳು ಹಾಳಾಗಿದ್ದರೂ ಕೂಡ ಅವರು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ . ಕೂಡಲೇ ಯಂತ್ರಗಳನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್ ಮಾತನಾಡಿ, ಜಿಲ್ಲೆಯ ರೈತ ಸಮುದಾಯವು ಕಳೆದ ಮೂರು ವರ್ಷಗಳಿಂದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿನ ತಾರತಮ್ಯ ಹಾಗೂ ತಾಂತ್ರಿಕ ಲೋಪಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ರೈತರು ವಿಮೆ ಪರಿಹಾರದಿಂದ ವಂಚಿತರಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಬನವಾಸಿ ಮಂಡಳ ಅಧ್ಯಕ್ಷ ರಮೇಶ ನಾಯ್ಕ, ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದ್ದು ತೋಟಗಾರರ ಮತ್ತು ರೈತರ ಪರಿಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಪಾರದರ್ಶಕತೆ ತರಬೇಕು.ಅನ್ಯಾಯಕ್ಕೆ ಕಾರಣರಾದ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಂಚಾಯಿತಿವಾರು ಪ್ರತಿ ತಿಂಗಳ ಮಳೆಮಾಪನ ವರದಿಯನ್ನು ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ರೈತರ ವೀಕ್ಷಣೆಗೆ ಸಿಗುವಂತೆ ಲಭ್ಯವಾಗಿಸಬೇಕು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಪ್ರಮುಖರಾದ ಜಿ.ಆರ್.ಹೆಗಡೆ ಬೆಳ್ಳೆಕೇರಿ, ವಿ.ಎನ್.ಹೆಗಡೆ, ಡಿ.ಎಸ್.ಹೆಗಡೆ ಕಡವೆ, ಪ್ರವೀಣ ಹೆಗಡೆ ಮಣ್ಮನೆ, ಆರ್.ವಿ.ಹೆಗಡೆ, ನಾಗರಾಜ ಹೆಗಡೆ, ಮಹೇಂದ್ರ ಹೆಗಡೆ, ಅನಸೂಯ ಹೆಗಡೆ, ಜಿ.ಎನ್.ಹೆಗಡೆ ನಕ್ಷೆ, ವಿನಾಯಕ ಹೆಗಡೆ ಶಿಗೇಹಳ್ಳಿ, ಪ್ರಸಾದ ಹೆಗಡೆ, ರವಿ ಹಳದೋಟ, ನರಸಿಂಹ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net