ಈಗಾಗಲೇ ಸಾಕಷ್ಟು ಅನಾಹುತಗಳಿಗೆ ಕಾರಣವಾದ ಹಾಲಿ ಇರುವ ಒಳಚರಂಡಿ ವ್ಯವಸ್ಥೆಗೆ ಮತ್ತಷ್ಟು ಸಂಪರ್ಕ ನೀಡುತ್ತಿರುವುದಕ್ಕೆ ಇನ್ನಷ್ಟು ಆಕ್ಷೇಪ ಕೇಳಿ ಬಂದಿದೆ. 2007 ರಲ್ಲಿ ಕುಡ್ಸೆಂಪ್ ಯೋಜನೆಯಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ನಗರದ ನಡುವೆ ಇರುವ 8 ವಾರ್ಡ್ಗಳಿಗೆ ಸಂಪರ್ಕ ಕಲ್ಪಿಸುವ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. 14 ಕಿಮೀ ಒಳ ಚರಂಡಿ ಸಂಪರ್ಕ ಜಾಲ ನೂರಾರು ಚೇಂಬರ್‌ಗಳನ್ನು ರಚಿಸಲಾಗಿತ್ತು. 2,233 ಮನೆ, ಹೋಟೆಲ್ ಮುಂತಾದವುಗಳ ಸಂಪರ್ಕ ಕಲ್ಪಿಸಲಾಗಿದೆ.